ಈದುಲ್ ಫಿತ್ರ್ರ್ ಹಬ್ಬದ ಮರು ದಿವಸ ನಗರದ ಮಸೀದಿಯೊಂದರಲ್ಲಿ ಮುಸ್ಲಿಮೇತರರಿಗಾಗಿ ಓಪನ್ ಮಸ್ಚಿದ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೆಹದಿಪಟ್ಟಣಂ ನಾನಾಲ್ ನಗರದ ಮಸ್ಚಿದೆ ಎ ಕೂಬದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಸಂದರ್ಶಕರಿಗೆ ಇಸ್ಲಾಮಿನ ಶಿಕ್ಷಣ ಮತ್ತು ಇಸ್ಲಾಮಿನ ಕುರಿತು ಇರುವ ತಪ್ಪುಕಲ್ಪನೆಗಳನ್ನು ದೂರೀಕರಿಸುವ ಪ್ರಯತ್ನ ನಡೆಸಲಾಯಿತು.

ಮಸೀದಿಯನ್ನು ಎಲ್ಲ ಧರ್ಮದವರೊಂದಿಗೆ ಸಂವಾದಕ್ಕೆ ಸುಗಮವಾಗುವಂತೆ ಎಲ್ಲರಿಗಾಗಿ ತೆರೆದಿರಿಸಲಾಗಿತ್ತು. ನಮಾಝ್, ಅದಾನ್, ವಝೂ ಸಹಿತ ಮುಸ್ಲಿಮ್ ಸಮುದಾಯದ ಕೆಲವು ದಿನ ಚರ್ಯೆಗಳ ಕುರಿತು ಸಂದರ್ಶಕರಿಗೆ ವಿವರಿಸಲಾಯಿತು.

ಇಸ್ಲಾಮಿನ ಮೂಲ ಸಿದ್ಧಾಂತಗಳ ಪೋಸ್ಟರ್‍ಗಳನ್ನು ಮಸೀದಿಯಲ್ಲಿ ಅಂಟಿಸಲಾಗಿತ್ತು. ಭೇಟಿ ನೀಡಿದವರಿಗೆ ಪವಿತ್ರ ಕುರ್‍ಆನ್‍ನ ಪ್ರತಿಗಳನ್ನು ಹಂಚಲಾಗಿದೆ.

ಕ್ರೈಸ್ತ, ಸಿಖ್, ಹಿಂದೂ ಭಾಂಧವರ ಸಹಿತ ಬೇರೆ ಬೇರೆ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಿದ್ದು, ಅದಾನ್‍ನ ಅರ್ಥ, ಮುಸ್ಲಿಮರು ಹೇಗೆ ನಮಾಝ್ ಮಾಡುತ್ತಾರೆ. ಮಸೀದಿಯಲ್ಲಿ ಮೀನಾರ ಇರುವುದು ಏತಕ್ಕೆ ಮೊದಲಾದ ವಿಷಯಗಳನ್ನು ವಿವರಿಸಲಾಯಿತು.

ಈ ಮಸೀದಿಯನ್ನು ಸೈಯದ್ ಅಕ್ತಾರ್ ನಿರ್ಮಿಸಿದ್ದು 850 ಗಜ ವಿಸ್ತಾರ ಹೊಂದಿದೆ. ನಸೀರ್ ಅಝೀಝ್ ಮತ್ತು ಝಾಹಿರ್ ಅಹ್ಮದ್ ವಿನ್ಯಾಸ ಮಾಡಿದ್ದಾರೆ. ಈ ಮಸೀದಿಯು ಈಜಿಪ್ಟ್ ಮತ್ತು ಅರಬಸ್ಥಾನದ ವಾಸ್ತು ಕಲೆಯನ್ನು ಹೊಂದಿದೆ.

Leave a Reply