ಚೆನ್ನೈ: ಸುರಕ್ಷತೆಯ ಸುಭದ್ರತೆಯ ನಗರವಾಗಿ ಚೆನ್ನೈ ಯನ್ನು ಬದಲಿಸಲು ಚೆನ್ನೈ ಪೋಲೀಸ್ ಸಿದ್ದಗೊಂಡಿದೆ.

ಇದರ ಭಾಗವಾಗಿ ಸಿಟಿ ಪೋಲೀಸರು ಪ್ರಾರಂಭಿಸಿದ ಆಪರೇಶನ್ ಕ್ರೈಮ್ ಫ್ರೀ ಚೆನ್ನೈ ಎಂಬ ಹೆಸರಿನಡಿಯಲ್ಲಿ ನಡೆದ ಕಾರ್ಯಚರಣೆಯಲ್ಲಿ 3500 ಜನರನ್ನು ಸೆರೆಹಿಡಿಯಲಾಗಿದೆ.

ನಗರದ ವಸತಿ ಗೃಹಗಳು ಸೇರಿ ಅನೇಕ ಕಡೆ ನಡೆದ ತಪಾಸಣೆಯಲ್ಲಿ ವಿವಿಧ ಅಪರಾಧಗಳಲ್ಲಿ ಹೆಸರಿಸಲ್ಪಟ್ಟ 442 ಮಂದಿಯನ್ನು ಬಂಧಿಸಲಾಗಿದೆ. ಜಾಮೀನು ರಹಿತ ವಾರೆಂಟ್‍ನಲ್ಲಿ 20 ಮಂದಿಯನ್ನು ವಿವಿಧ ಪ್ರಕರಣಗಳಲ್ಲಿ ಪೋಲೀರಿಂದ ತಪ್ಪಿಸಿಕೊಂಡ ಏಳು ಮಂದಿಯನ್ನು ಬಂಧಿಸಲಾಗಿದೆಯೆಂದು ಪೋಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾದ ನೂರರಷ್ಟು ಜನರೂ ಸೇರಿದ್ದಾರೆ.

ಈ ಹಿಂದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಈಗ ಸಕ್ರಿಯರಾಗಿರುವವರೂ ಬಂಧಿತರಲ್ಲಿ ಸೇರಿದ್ದಾರೆ. ಈ ಆಪರೇಶನ್ ನ ಭಾಗವಾಗಿ ನಗರದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಬೀಚ್ ತಾಣಗಳು, ಚಿಲಕ ಹಾಕಿ ಮುಚ್ಚಿದ ದೊಡ್ಡ ಕಟ್ಟಡಗಳು ಬಾರ್ ಮುಂತಾದೆಡೆ ತಂಡವಾಗಿ ತೆರಳಿ ರಾತ್ರಿ ಹತ್ತರಿಂದ ಮುಂಜಾನೆ ನಾಲ್ಕರವರೆಗೆ ಮತ್ತು ಮುಂಜಾನೆ ನಾಲ್ಕರಿಂದ ರಾತ್ರಿ ಹತ್ತರ ತನಕ ಎರಡು ಶಿಫ್ಟ್ ಆಗಿ ತಪಾಸಣೆ ನಡೆಸಲಾಗುತ್ತಿದೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಲ್ಲಿ ಈ ಕಾರ್ಯಾಚರಣೆ ನಡುಕ ಹುಟ್ಟಿಸಿದೆ.

Leave a Reply