Naomi Osaka, of Japan, kisses the trophy after defeating Serena Williams in the women's final of the U.S. Open tennis tournament, Saturday, Sept. 8, 2018, in New York. (AP Photo/Julio Cortez)

ನ್ಯೂಯಾರ್ಕ್ : ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ 24 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಆಟಗಾರ್ತಿ ಸೆರನಾ ವಿಲಿಯಮ್ಸ್ ರಿಗೆ ಸೋಲುಣಿಸುವ ಮೂಲಕ ಜಪಾನಿನ ನವೋಮಿ ಒಸಾಕ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.

20 ವರ್ಷದ ಒಸಾಕ 34 ವರ್ಷದ ಸೆರೆನಾ ವಿಲಿಯಮ್ಸ್ ರನ್ನು6-2, 6-4 ರ ನೇರ ಸೆಟ್ ಗಳಿಂದ ಪರಾಭವ ಗೊಳಿಸಿದರು. ಇದರಿಂದ 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ದಾಖಲೆ ಮಾಡಲು ಹೋರಾಟ ಸೆರನಾರ ಕನಸು ಭಗ್ನವಾಯಿತು.

“ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಕ್ಕೆ ಅತೀವ ಸಂತೋಷ ಆಗಿದೆ. ಹಿರಿಯ ಆಟಗಾರ್ತಿ ಸೆರೆನಾರ ವಿರುದ್ಧದ ಗೆಲುವು ಸಂತಸವನ್ನು ಇಮ್ಮಡಿ ಗೊಳಿಸಿದೆ. ಇದು ನನ್ನ ಟೆನಿಸ್ ಜೀವನದ ಮಹತ್ವದ ಕ್ಷಣ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಇನ್ನೂ ಉತ್ತಮ ಪ್ರದರ್ಶನ ನೀಡಲು ಇದು ಸ್ಫೂರ್ತಿ ಯಾಗಿದೆ ಎಂದು ಒಸಾಕ ಹೇಳಿದರು.

 

Leave a Reply