ಉ‌.ಪ್ರ :  ಸಾಮಾಜಿಕ ಜಾಲತಾಣಗಳಲ್ಲಿ ಮನಕಲಕುವ ನಾಯಿಯ ಚಿತ್ರವೊಂದು ವೈರಲ್ ಆಗಿದೆ. ಕನ್ಸ್ಟ್ರಕ್ಟರ್ ಕಂಪೆನಿಯೊಂದು ಸತ್ತ ನಾಯಿ ದೇಹದ ಮೇಲೆ ಡಾಮರೀಕರಣದ ರಸ್ತೆಯನ್ನು ನಿರ್ಮಾಣ ಮಾಡಿದೆ.

ಫೂಲ್ ಸಯ್ಯದ್ ರಸ್ತೆಯ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆ ವೇಳೆ ರಸ್ತೆಯ ಬದಿಯಲ್ಲಿ ನಾಯಿಯೊಂದು ಮಲಗಿತ್ತು. ಈ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಕಲ್ಲಿದ್ದಲು ಟಾರ್ ಅನ್ನು ಹಾಕುವ ವೇಳೆ ನಾಯಿಯನ್ನು ಎಬ್ಬಿಸದೇ ಅದರ ದೇಹದ ಮೇಲೆಯೇ ಬಿಸಿ ಡಾಮರನ್ನು ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಡಾಮರಿನ ಬಿಸಿಗೆ ನಾಯಿ ನೋವಿನಿಂದ ಅರಚಿದ್ದು ಸಾಯುವ ವರೆಗೂ ರೋದಿಸಿ ಕೂಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಸತ್ತ ನಾಯಿಯ ದೇಹವನ್ನು ತೆಗೆದು ಹಾಕಲಾಯಿತು. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕೃತ್ಯ ಎಸಗಿದವರಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Leave a Reply