ಯಾವುದೇ ವಿಚಾರದಲ್ಲಿ ಸರಿ-ತಪ್ಪುಗಳು, ಸಕಾರಾತ್ಮಕ- ನಕಾರಾತ್ಮಕ ಅಂಶಗಳು ಇದ್ದೇ ಇರುತ್ತದೆ. ಅತಿಯಾದ ಫೇಸ್‌ಬುಕ್‌ ವಾಟ್ಸಪ್ ಬಳಕೆಯಿಂದ ಆಗುವ 20 ನಕಾರಾತ್ಮಕ ಪರಿಣಾಮಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಆಗಿರಬಹುದು.

1. ನಕಾರಾತ್ಮಕ ಅಂಶಗಳು ಜೀವನದಲ್ಲಿ ಬಹಳ ಪರಿಣಾಮ ಬೀರುತ್ತದೆ. ಅಂತಹ ಅಂಶಗಳು ಸೋಶಿಯಲ್ ಮೀಡಿಯಾ ಅಡಿಕ್ಷನ್ ನಿಂದ ಉಂಟಾಗುತ್ತದೆ.

2. ನೀವು ನಿಮ್ಮ ಹಳೆಯ ಸ್ವಭಾವವನ್ನು ಕಳೆಯುತ್ತೀರಿ. ನಿಮ್ಮ ಸುಂದರ ಹಳೆಯ ದಿನಗಳ ಮನರಂಜನೆಯನ್ನು ನಷ್ಟ ಪಡಿಸುತ್ತೀರಿ.

3. ನಿಮ್ಮ ವ್ಯಕ್ತಿತ್ವ ನಿಮಗರಿವಿಲ್ಲದಂತೆಯೇ ಬದಲಾಗುತ್ತದೆ. ನೀವು ಎಲ್ಲರ ನಡುವೆ ಇದ್ದೂ ಇಲ್ಲದಂತೆ ಇರುತ್ತೀರಿ.

4. ಸದಾ ಅದರಲ್ಲಿ ಮುಳುಗಿರುವುದರಿಂದ ನೀವು ಏನನ್ನೂ ಕೇಳಲು ಇಷ್ಟ ಪಡದ ಒರಟು ಸ್ವಭಾವದವರಾಗುತ್ತೀರಿ. ಯಾರಾದರೂ ಏನಾದರೂ ಹೇಳಿದರೆ, ನಿಮ್ಮಲ್ಲಿ ಕೇಳುವಷ್ಟು ಸಂಯಮ ಪರಿವೆ ಇರುವುದಿಲ್ಲ.

5. ನೀವು ಎಷ್ಟು ಸಮಯಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಕಳೆಯುತ್ತಿದ್ದೀರಿ ಎಂಬ ಪರಿಜ್ಞಾನ ನಿಮ್ಮಲ್ಲಿ ಇರಲ್ಲ. ಮಾತ್ರವಲ್ಲ, ಎಷ್ಟು ಸಮಯವನ್ನು ವ್ಯರ್ಥ ಗೊಳಿಸಿದಿರಿ ಎಂದು ಅಳೆಯಲೂ ಸಾಧ್ಯವಾಗಲ್ಲ.

6. ನೀವು ಹೆಚ್ಚು ಹೆಚ್ಚು ಗೌಪ್ಯವಾಗಿರಲು ಬಯಸುತ್ತೀರಿ. ಇದರಿಂದಾಗಿ ಮಾನಸಿಕ ಅಸಂತುಲನೆ ಉಂಟಾಗುವ ಸಾಧ್ಯತೆ ಇದೆ.

7. ನಿಮ್ಮ ಗ್ರಾಹಕರು ಏನು ಹೇಳುತ್ತಿದ್ದಾರೆಂದು ಕೇಳಲು ನೀವು ಬಯಸುವುದಿಲ್ಲ. ಇದರಿಂದಾಗಿ ವ್ಯಾಪಾರ ವಹಿವಾಟು ಕೂಡ ನಷ್ಟ ಆಗುತ್ತದೆ.

8. ನೀವು ಈಗಾಗಲೇ ತುಂಬಾ ಕಾರ್ಯನಿರತರಾಗಿರುವುದರಿಂದ ಯಾವುದೇ ಹೊಸ ಗ್ರಾಹಕರನ್ನು ನೀವು ಇಷ್ಟ ಪಡಲ್ಲ. ಅದು ಸುಪ್ತವಾಗಿ ನಿಮಗೆ ಕಿರಿಕಿರಿಯನ್ನು ಮಾಡಲು ತೊಡಗುತ್ತವೆ.

9. ನಿಮ್ಮ ಬಗ್ಗೆ ಜನರು ಅಸಹ್ಯವಾದ ಮಾತುಗಳನ್ನು ಆಡಬಹುದು ಎಂದು ನೀವು ಭಯಪಡುತ್ತೀರಿ. ಅದು ನಿಮ್ಮ ಮನಸ್ಸಲ್ಲಿ ಆಳವಾಗಿ ಬೇರೂರುತ್ತದೆ.

10. ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾದ ಸಮಯ ಕಳೆಯುವುದರಿಂದ ಪ್ರೊಡಕಟಿವ್ ಸ್ಪರ್ಧಾತ್ಮಕ ವಿಷಯಗಳಿಂದ ನೀವು ದೂರ ನಿಲ್ಲುತ್ತೀರಿ.

11. ಯಾವ ವಿಷಯಗಳನ್ನು ನೀವು ಲಘುವಾಗಿ ಪರಿಗಣಿಸುತ್ತೀರಿ, ಅದು ಟ್ವಿಟರ್, ಫೇಸ್ಬುಕ್ ಮೂಲಕ ಜಟಿಲವಾಗಿ ಅನುಭವಕ್ಕೆ ಬರುತ್ತದೆ.

12. ಬಹಳ ಮುಖ್ಯವಾಗಿ ತನ್ನತನವನ್ನು ಕಳೆದು ಕೊಳ್ಳುತ್ತಾರೆ ಮತ್ತು ಫೇಕ್ ಗಳಿಗೆ ಮಾರು ಹೋಗುತ್ತಾರೆ.

13. ಸಮಯ ವ್ಯರ್ಥ ಮಾಡುವ ಜನರ ಪಟ್ಟಿಯಲ್ಲಿ ಜನರು ನಿಮ್ಮನ್ನೂ ಸೇರಿಸಿ ಬಿಡುತ್ತಾರೆ.

14. ನಿಮ್ಮ ಸುತ್ತಲೂ ನಡೆಯುತ್ತಿರುವ ಉತ್ತಮ ಸಂಗತಿಗಳಿಂದ ನೀವು ದೂರವಾಗುತ್ತೀರಿ.

15. ನಿಮ್ಮ ಸಂಬಂಧಗಳು ಶಿಥಿಲವಾಗುತ್ತಾ ಹೋಗುತ್ತದೆ.

16. ಸಮಾಜದಲ್ಲಿರುವ ಅವಕಾಶ ವಂಚಿತರಾದವರಲ್ಲಿ ನೀವೂ ಸೇರುತ್ತೀರಿ. ನಿಮ್ಮ ಸಮಯವೆಲ್ಲಾ ಆನ್ಲೈನ್ ನಲ್ಲಿ ಕಳೆದಿರುತ್ತದೆ.

17. ಮಕ್ಕಳು ದೂರವಾಗುತ್ತಾರೆ ಅಥವಾ ಅವರು ಹತ್ತಿರ ಬಂದರೆ ಕೋಪ ಬರುತ್ತದೆ.

18. ಕಣ್ಣು ಮತ್ತು ಮೆದುಳು, ಮಾನಸಿಕ ಆರೋಗ್ಯದ ಮೇಲೆ ವಿಪರೀತ ಪ್ರತಿಕೂಲ ಪರಿಣಾಮ ಬೀರುತ್ತದೆ.

19. ಮೊದಮೊದಲು ಹವ್ಯಾಸವಾಗಿದ್ದುದು ನಂತರ ಅಡಿಕ್ಷನ್ ಆಗಿ ಪರಿವರ್ತನೆ ಆಗುತ್ತದೆ.

20. ಮುಖ್ಯವಾಗಿ ಮನುಷ್ಯನಿಗೆ ಬೇಕಾದ ಸಂತುಲಿತ ನಿದ್ದೆ, ಬದುಕು ನಷ್ಟ ಆಗುತ್ತದೆ.

Leave a Reply