ಹಾವೇರಿ: ಭಾರತೀಯ ಸೇನೆ ಯೋಧರೊಬ್ಬರು ಕಾರ್ಯನಿರ್ವಹಿಸುತ್ತಿದ್ದ ವೇಳೆ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಹುತಾತ್ಮರಾಗಿದ್ದಾರೆ. ಅವರ ಪ್ರಾರ್ಥಿವ ಶರೀರವು ಅವರ ಊರಿಗೆ ಇಂದು ಬರುವ ನಿರೀಕ್ಷೆ ಇದೆ.

ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದ ಚಂದ್ರಶೇಖರ ಡವಗಿ ಕರ್ತವ್ಯದ ನಿರತರಾಗಿದ್ದ ವೇಳೆಆಮ್ಲಜನಕ ಕೊರತೆಯಿಂದ ಸಾವನಪ್ಪಿದ್ದಾರೆ ಎನ್ನಲಾಗಿದೆ.

ಚಂದ್ರಶೇಖರ ಕಳೆದ 16 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 2002ರಲ್ಲಿ ಮದ್ರಾಸ್ ರೆಜಿಮೆಂಟ್ ಸೆಂಟರ್ ನಲ್ಲಿ ಸೇವೆಗೆ ಸೇರಿದ್ದ ಇವರು ಜನವರಿ 29 ರಂದು ರಜೆ ಮುಗಿಸಿ ಸೇನೆಗೆ ಮರಳಿದ್ದರು.

ಹುತಾತ್ಮ ಚಂದ್ರ ಶೇಖರ ತಂದೆ, ತಾಯಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಮರಣ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಕರಿಛಾಯೆ ಆವರಿಸಿದೆ. ಜಿಲ್ಲಾಡಳಿತ ಅಂತ್ಯಸಂಸ್ಕಾರದ ಸಿದ್ಧತೆ ನಡೆಸಿದೆ.

Leave a Reply