ಕೋಲ್ಕತ್ತಾ: ತಮ್ಮ ಮೇಕೆಗಳನ್ನು ರಾಕ್ ಪೈಥಾನ್ ಹೆಬ್ಬಾವು ತಿಂದು ಹಾಕುತ್ತಿದೆ ಎಂದು ಜಲ್ಪೈಗುರಿ ಹಳ್ಳಿಗಾಡಿನ ಜನರು ಅರಣ್ಯ ಅಧಿಕಾರಿಗಳಿಗೆ ಕರೆಮಾಡಿ ದೂರು ನೀಡಿದ್ದರು. ಹೆಬ್ಬಾವನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹಳ್ಳಿಗೆ ಧಾವಿಸಿ, 18 ಅಡಿ ಉದ್ದದ ಸುಮಾರು 40 ಕೆ.ಜಿ ತೂಕದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಜನ ಸಂದಣಿ ಸೇರಿತ್ತು. ಹೆಬ್ಬಾವನ್ನು ಕಂಡು ಜನರು ಸೆಲ್ಫಿ ತೆಗಯಲು, ಅಧಿಕಾರಿಗಳನ್ನು ಸುತ್ತು ವರಿಯಲು ತೊಡಗಿದರು

ಈ ಸಂದರ್ಭದಲ್ಲಿ ಜನರನ್ನು ರಂಜಿಸಲು ಸೆಲ್ಫಿಗೆ ಪೋಸು ನೀಡಿದ ಅರಣ್ಯ ಅಧಿಕಾರಿಯ ಕುತ್ತಿಗೆಯನ್ನು ಹಾವು ಗಟ್ಟಿಯಾಗಿ ಸುತ್ತಿ ಹಿಡಿಯಲು ಪ್ರಾರಂಭಿಸಿತ್ತು. ಸ್ವಲ್ಪ ಅಜಾಗರೂಕತೆ ಆಗಿದ್ದರೆ ಅರಣ್ಯ ಅಧಿಕಾರಿಯ ಪ್ರಾಣವೇ ಅಪಾಯಕ್ಕೆ ಸಿಲುಕುತ್ತಿತ್ತು. ಸಾಧಾರಣವಾಗಿ ಹೆಬ್ಬಾವನ್ನು ಹಿಡಿದರೆ ಅಧಿಕಾರಿಗಳು ಗೋಣಿ ಚೀಲದಲ್ಲಿ ತುಂಬಿಸಿ ಹೋಗುತ್ತಿದ್ದರು. ಹೇಗಾದರೂ ಹಾವಿನ ಸಂಕಲೆಯಿಂದ ಕುತ್ತಿಗೆಯನ್ನು ಬೇರ್ಪಡಿಸಿದ ಅಧಿಕಾರಿ ಜನರ ಮಧ್ಯದಿಂದ ಬೊಬ್ಬೆ ಹಾಕ್ಕಿ ದೂರ ಓದಿದರು.

ಈ ದೃಶ್ಯವನ್ನು ನೋಡುತ್ತಿದ್ದ ಜನ ಒಮ್ಮೆಗೆ ದಂಗಾಗಿದ್ದು, ದೂರ ದೂರ ಚದುರಿದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು ನೀವೂ ನೋಡಬಹುದು.

Leave a Reply