ಸಲ್ಮಾನ್‌ ಖಾನ್‌ ನಾಯಕನಾಗಿ ಕಾಣಿಸಿಕೊಂಡಿರುವ ‘ಭಜರಂಗಿ ಭಾಯಿಜಾನ್’ ಬಾಲಿವುಡ್‌ನ‌ಲ್ಲಿ ಭಾರೀ ಸಂಚಲನ ಮೂಡಿಸಿರುವ ಚಿತ್ರ. ಇಂಡೋ-ಪಾಕ್ ಕಥೆಯನ್ನು ಹೊಂದಿದ ಈ ಚಿತ್ರ, ಅನಿರೀಕ್ಷಿತವಾಗಿ ಭಾರತದ ಗಡಿಯೊಳಗೆ ಸಿಲುಕಿಕೊಳ್ಳವ ಪಾಕ್ ಹೆಣ್ಣು ಮಗುವನ್ನು ಪುನಃ ತಮ್ಮ ಹೆತ್ತರವರ ಮಡಿಲಿಗೆ ತಲುಪಿಸುವ ಪಾತ್ರದಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದಾರೆ.

ಇದೀಗ ಭಾರತದ ಸೈನಿಕರೂ ಅಂತಹದ್ದೇ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. 11 ರ ಹರೆಯದ ಪಾಕಿಸ್ತಾನದ ಬಾಲಕ ಗಡಿಯನ್ನು ಅರಿಯದೆ ಭಾರತದೊಳಗೆ ಪ್ರವೇಶಿಸಿ ಬಿಟ್ಟಿದ್ದ, ಇದೀಗ ಮೂರು ದಿನದ ಬಳಿಕ ತನ್ನ ತಾಯಿ ನಾಡನ್ನು ಸೇರಿಕೊಂಡಿದ್ದಾನೆ.

ಪೂಂಛ್ ಜಿಲ್ಲೆಯಲ್ಲಿ ಭಾರತೀಯ ಸೈನಿಕರು ಜೂನ್ 24 ಕ್ಕೆ ವಶಕ್ಕೆ ಪಡೆದಿದ್ದರು. ನಂತರ ಆತನಿಗೆ ಇರುವ ಎಲ್ಲ ವ್ಯವಸ್ಥೆ ಮಾಡಿದ ಸೈನಿಕರು. ಮೂರು ದಿನದ ನಂತರ ಮಾನವೀಯ ನೆಲೆಯಲ್ಲಿ ಆತನನ್ನು ಪಾಕ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಹಸ್ತಾಂತರಿಸುವ ಮುನ್ನ ಆತನಿಗೆ ಹೊಸ ಬಟ್ಟೆ ಮತ್ತು ಸಿಹಿ ತಿಂಡಿಗಳನ್ನು ನೀಡಲಾಗಿತ್ತೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಕರಣದಲ್ಲಿ ಬಾಲಕನೊಂದಿಗೆ ಅತ್ಯುತ್ತಮ ರೀತಿಯಲ್ಲಿ ವರ್ತಿಸಿ ಭಾರತೀಯ ಸೇನೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದಂತಾಗಿದೆ ಸೇನೆಯ ಪರ ವಕ್ತಾರರು ತಿಳಿಸಿದ್ದಾರೆ.

Leave a Reply