ವಾಷಿಂಗ್ಟನ್: ಅಮೆರಿಕನ್ನರು ಪ್ರತಿದಿನ ಸುಮಾರು 150,000 ಟನ್ನುಗಳಷ್ಟು ಆಹಾರವನ್ನು ವ್ಯರ್ಥ ಮಾಡುತ್ತಾರೆ ಹಾಗೂ ಹಣ್ಣು ಹಂಪಲುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಎಸೆಯುತ್ತಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗ ಪಡಿಸಿದೆ.

ಎಸೆಯಲ್ಪಡುವ ಆಹಾರಗಳು, ಪ್ರತಿದಿನ ಒಬ್ಬ ಮನುಷ್ಯ 450 ಗ್ರಾಂ ನಷ್ಟು ತಿನ್ನಬಹುದು ಎಂದು ಅಂದಾಜಿಸಲಾಗಿದೆ. ತಿಂಡಿಗಳು, ತೈಲಗಳು, ಮೊಟ್ಟೆ ಭಕ್ಷ್ಯಗಳು, ಕ್ಯಾಂಡಿ ಮತ್ತು ತಂಪು ಪಾನೀಯಗಳೂ ಈ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಅಂದಾಜಿನ ಪ್ರಕಾರ, ವಿಶ್ವದಾದ್ಯಂತ 795 ಮಿಲಿಯನ್ ಜನರು ತೀವ್ರವಾದ ಬಡತನದಿಂದ ಬಳಲುತ್ತಿದ್ದಾರೆ. ಒಂದೆಡೆ ಬಡ ರಾಷ್ಟ್ರಗಳಲ್ಲಿ ಮಕ್ಕಳು ಹಸಿವಿನಿಂದ ಸಾಯುತ್ತಿದ್ದರೆ ಅಭಿವೃದ್ಧಿ ರಾಷ್ಟ್ರಗಳು ಆಹಾರವನ್ನು ಪೋಲು ಮಾಡುತ್ತಿರುವುದು ದುರಂತ ಆಗಿದೆ.

Leave a Reply