ಆಂಧ್ರಪ್ರದೇಶದಲ್ಲಿ ಕೀಟನಾಶಕಗಳನ್ನು ಸೇವಿಸಿದ ಪರಿಣಾಮವಾಗಿ ಸುಮಾರು 56 ಹಸುಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರದಂದು ನಡೆದಿದೆ.

ವರದಿಯ ಪ್ರಕಾರ, ಗುಂಟೂರು ಜಿಲ್ಲೆಯ ರೈತರು ತಮ್ಮ ಗದ್ದೆಗಳಲ್ಲಿ ಸತ್ತು ಬಿದ್ದಿರುವ ಪಶುಗಳನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. ಈ 56 ಹಸುಗಳು
ತೆಲಂಗಾಣದ ನಲ್ಗೊಂಡ ಜಿಲ್ಲೆಯ ನೆಡೆಚೆರ್ಲಾ ಗ್ರಾಮದ ಗುಂಡಾಲ ಲಕ್ಮಯ್ಯ ಎಂಬವರದ್ದು ಎಂದು ಗುರುತಿಸಲಾಗಿದ್ದು ಅವರು ದನಗಾಹಿ ಆಗಿದ್ದಾರೆ. ಅವರು ಸುಮಾರು 100 ಹಸುಗಳನ್ನು ಮೇಯಲು ತಂದಿದ್ದರು ಎನ್ನಲಾಗಿದೆ.

ಕೆಲವು ಹಸುಗಳು ಜೋಳದ ಗದ್ದೆಯಲ್ಲಿ ಮೇಯಲು ಹೋಗಿದ್ದುವು, ಅಲ್ಲಿ ಎರಡು ವಾರಗಳ ಹಿಂದೆ ಹೈಡ್ರೋಜನ್ ಸೈನೈಡ್ ನಂತಹ ಕೀಟನಾಶಕಗಳನ್ನು ಸಿಂಪಡಿಸಿ ಜೋಳವನ್ನು ಕೊಯ್ದಿದ್ದರು.

“ಸಾಮಾನ್ಯವಾಗಿ, ಜಾನುವಾರುಗಳ ಇಂತಹ ವಿಷ ಸೇವಿಸಿದರೆ ಸ್ವಯಂ ಪ್ರತಿರೋಧವನ್ನುಂಟು ಮಾಡಿ ಗುಣಮುಖವಾಗುತ್ತದೆ, ಆದರೆ ಅವು 20 ಮಿಗ್ರಾಂಗಿಂತ ಹೆಚ್ಚು ಸೇವಿಸಿದರೆ ಅವುಗಳು ಬದುಕಲಾರವು”ಎಂದು ಸಹಾಯಕ ಪಶುವೈದ್ಯ ಶಸ್ತ್ರಚಿಕಿತ್ಸಕ ಡಾ. ಶೇಖ್ ಬಶೀರ್ ಹೇಳಿದ್ದಾರೆ.

Leave a Reply