ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಶೋಷಣೆ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ. ನಮ್ಮನ್ನು ರಕ್ಷಿಸುವ ಪೋಲೀಸರೇ ಕಾಮುಕರಾದರೆ ಜನಸಾಮಾನ್ಯರ ಅವಸ್ಥೆ ಏನಾಗಬಹುದು?

ಈ ದಿನ ವಿಡಿಯೋವೊಂದು ಆನ್ಲೈನ್ನಲ್ಲಿ ವೈರಲ್ ಆಗಿದೆ. ರೈಲ್ವೆ ಸ್ಟೇಷನ್ ನಲ್ಲಿ ಪೋಲೀಸನೊಬ್ಬ ನಿದ್ದೆ ಮಾಡುವವನಂತೆ ನಟಿಸಿ ಅವನ ಮುಂದೆ ಕುಳಿತಿರುವ ಮಹಿಳೆಯ ದೇಹವನ್ನು ಆಗಾಗ ಸ್ಪರ್ಶಿಸುತ್ತಿದ್ದ. ಇದನ್ನು ಆತನ ಅರಿವಿಗೆ ಬಾರದಂತೆ ಸಾರ್ವಜನಿಕರು ವಿಡಿಯೋ ಮಾಡುತ್ತಿದ್ದರು. ವ್ಯಕ್ತಿ ಕಲ್ಯಾಣ್ ಪ್ರದೇಶದ ಪೋಲಿಸ್ ಎಂದು ತಿಳಿದು ಬಂದಿದೆ.

ನಂತರ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ, ಮಹಿಳೆಯೊಂದಿಗೆ ಪ್ರತಿಭಟಿಸುವಂತೆ ಪ್ರೋತ್ಸಾಹಿಸುತ್ತಾರೆ. ನಂತರ ಸಾರ್ವಜನಿಕರು ಸೇರಿ ಆ ಪೊಲೀಸನಿಗೆ ಧರ್ಮದೇಟು ನೀಡಿದರು.

ಈ ಸುದ್ದಿಯನ್ನು scoopwhoop.com ವರದಿ ಮಾಡಿದ್ದು ವಿಡಿಯೋಗಾಗಿ ಲಿಂಕ್ ಕ್ಲಿಕ್ಕಿಸಿ.

https://www.scoopwhoop.com/policeman-filmed-trying-to-feel-up-a-woman-in-public/?ref=social&type=fb&b=0#.m1hovhynm

Leave a Reply