ಬೆಂಗಳೂರು: “ಜಗ್ಗೇಶ್ ರವರೆ…ಭಿನ್ನಾಭಿಪ್ರಾಯಗಳೋಂದಿಗೆ ಚರ್ಚಿಸಬೇಕೆ ಹೊರತು…ನಿಮ್ಮಿಂದ ಇಂತಹ ಕೀಳು ಅಭಿರುಚಿಯ ಮಾತುಗಳು ..ಖಂಡನೀಯ. ಎಲ್ಲರ ಮನಃ ಸಾಕ್ಷಿ…ಕನ್ನಡದ ಸಭ್ಯ ಸಮಾಜ ..ನೀವು ಪೂಜಿಸುವ ರಾಯರು ತಮ್ಮನ್ನು ನಿರ್ಧರಿಸಲಿ… ನಿಮಗೊಂದು ದೊಡ್ಡ ನಮಸ್ಕಾರ…” ಎಂದು ಪ್ರಕಾಶ್ ರೈ ಜಗ್ಗೇಶ್ ಅವರ ಟ್ವೀಟ್ ಗೆ ಮರುತ್ತರ ನೀಡಿದ್ದು, ಜಗ್ಗೇಶ್‌ ಟ್ವೀಟ್‌ಗಳಲ್ಲಿ ಬಳಸಿರುವ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿ ತೊಡೆತಟ್ಟಿದರೆ ಗಂಡಸುತನ ಎಂದಿದ್ದ ಜಗ್ಗೇಶ್‌ ಟ್ವೀಟ್‌ಗೆ ’ರಾಜಕೀಯ ಕಬಡ್ಡಿ ಆಟವಲ್ಲ…ನಿಮ್ಮ ಮನಸು, ಮಾತು ಸರಿಯಲ್ಲ’ ಎಂದು ಪ್ರಕಾಶ್‌ ರೈ ಉತ್ತರಿಸಿದ್ದರು. ಇದಕ್ಕೆ ಜಗ್ಗೇಶ್ ಟ್ವಿಟರ್ ಮೂಲಕ ಪ್ರಕಾಶ್ ರೈಯವರ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದರು.

ಜಗ್ಗೇಶ್ ಟ್ವೀಟ್- 1

ಗಂಡಸುತನ ಅಂದಿದ್ದಕ್ಕೆ ಅಸಹ್ಯ ಅನ್ನಿಸಿತೆ ತಮಗೆ?
ನನ್ನಪ್ರಕಾರ ಗಂಡಸ್ಸುತನ ಪದಬಳಕೆ ರಾಜಕೀಯದಲ್ಲಿ ಹೋರಾಟ!
ನನಗೆ ಗೊತ್ತಿರಲಿಲ್ಲಾ ನಿಮ್ಮ ಪ್ರಕಾರ ಗಂಡಸುತನ ಹೆಂಡತಿಯರಿಗೆ ಬಳಸುವುದು ಎಂದು!
ನನ್ನಬಧ್ಧತೆ ಕನ್ನಡನೆಲ ಕನ್ನಡಚಿತ್ರರಂಗ ಕನ್ನಡಿಗರುಮಾತ್ರ ಸಹೋದರ.
ಜೇವನಪೂರ್ತಿ ತಮಿಳುಸೇವೆ ಮಾಡಿ ಇಳಿವಯಸ್ಸಿನಲ್ಲಿ ಕನ್ನಡಕ್ಕಾಗಿ ತಮ್ಮ ಸೇವೆ..

ಜಗ್ಗೇಶ್ ಟ್ವೀಟ್ – 2

ಈಗ ಪಕ್ಕ ಅರಿವಾಯಿತು ತಾವು ಕಾಂಗ್ರೇಸ ಪಕ್ಷದ ಮುಖವಾಡದ ಒಳಗಿನ ಅನುಯಾಯಿ ಎಂದು! ನನಗೆಜನ ಹೇಳುತ್ತಿದ್ದರು ನಾನು ನಂಬಿರಲಿಲ್ಲಾ!ಈಗಲು ಕೇಳುವೆ ಪ್ರದರ್ಶಿಸಿ ರಾಜಕೀಯ ಪ್ರವೇಶಕ್ಕೆ ಗಂಡುಸ್ಸುತನ..! i mean ಹೋರಾಟ..!ನಾನು ರಂಗದ ಮೇಲೆ ನಟಿಸುವವರ ಇಷ್ಟಪಡವೆ! Side wingನ ನಕಲಿ ನಟರನ್ನ ಅಲ್ಲಾ!ಅದ್ಭುತ ನಟನ ಕವಲುದಾರಿ ನಡೆ ನೋಡಿ ದುಖ್ಖವಾಯಿತು!

Leave a Reply