ಪಾಂವ್ಟಾ ಸಾಹಿಬ್: ಒಳ್ಳೆಯ ಉದ್ಯೋಗಕ್ಕಾಗಿ ಯುವಕರು ಹೊರದೇಶಕ್ಕೆ ಹೋಗುತ್ತಾರೆ. ತಮ್ಮ ದೇಶದಲ್ಲಿ ಬೆಳೆದು ದೊಡ್ಡವರಾಗಿ ಶಿಕ್ಷಣ ಪಡೆದು ನಂತರ ಯುವಕರು ವಿದೇಶಕ್ಕೆ ಹೋಗಿ ಇರ ತೊಡತುತ್ತಾರೆ. ನಮ್ಮ ದೇಶವನ್ನು ಮರೆತುಬಿಡುತ್ತಾರೆ. ಅಂತಾದ್ದರಲ್ಲಿ ವಿದೇಶದಲ್ಲಿ ದೊಡ್ಡವನಗಿ ಶಿಕ್ಷಣ ಪಡೆದು ತನ್ನ ದೇಶ ಸೇವೆಯ ಮನೋಭಾವದಲ್ಲಿ ವಾಪಸು ಬರುವವರು ಇದ್ದಾರೆ.

ಉತ್ತರಪ್ರದೇಶದ ಗಾಝಿಯಾಬಾದಿನ ಪ್ರಣವ್ ದುಬೆ ಹಲವು ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ನಂತರ ತಮ್ಮ ಕುಟುಂಬದವರು ಹೇಳಿದರೆಂದು ಭಾರತಕ್ಕೆ ಬಂದರು ಮತ್ತು ಹಿಮಾಚಲಪ್ರದೇಶದ ಪಾಂವ್‍ಟಾ ಸಾಹಿಬ್‍ನಲ್ಲಿ ಡೈರಿಫಾರ್ಮ್ ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಸ್ಥಳೀಯ ಡಝನ್‍ಗಟ್ಟಲೆ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ.

ವಿದೇಶದಲ್ಲಿ ಡೈರಿ ಫಾರ್ಮ್‍ನಲ್ಲಿ ಬಳಸುವ ಆಧುನಿಕ ತಂತ್ರಜ್ಞಾನವನ್ನು ಇಲ್ಲಿಯೂ ಅಳವಡಿಸಿದ್ದಾರೆ. ಈತ ತನ್ನ ತಂದೆ ವಿವೇಕ್ ದುಬೆಯವರೊಂದಿಗೆ ಸೇರಿ ಪ್ರಣವ್ ಪಾವಂಟ ಸಾಹೇಬ್‍ನ ಭಗಾನಿಗ್ರಾಮದಲ್ಲಿ ಡೈರಿ ಫಾರ್ಮ್ ವ್ಯವಹಾರ ಶುರುಮಾಡಿದ್ದು ಅಲ್ಲಿ ಕೆಮಿಕಲ್ ರಹಿತ , ಕಲಬೆರಕೆಯಿಲ್ಲ ಹಾಲನ್ನು ಹತ್ತಿರದ ಉತ್ತರಖಂಡ ರಾಜ್ಯಕ್ಕೂ ವಿತರಿಸುತ್ತಿದ್ದಾರೆ. ಅವರು ಫಾರ್ಮ್ ತೆರೆಯಲು ಸರಕಾರದ ಕಚೇರಿಗೆ ಅಲೆದಾಡಿ ಹೇಗೂ ತೆರೆದು ಯಶಸ್ವಿಯಾಗಿದ್ದಾರೆ.

ಸರಕಾರದ ಸಹಕಾರವಿಲ್ಲದೆ ಆರುಕೋಟಿ ರೂಪಾಯಿ ವೆಚ್ಚದಲ್ಲಿ ಡೈರಿ ಫಾರ್ಮ್ ತೆರೆದಿದ್ದಾರೆ. ಇಲ್ಲಿ ಒಳ್ಳೆಯ ಜಾತಿಯ ಗೋವುಗಳನ್ನು ಸಾಕುತ್ತಿದ್ದಾರೆ. ಹೈಟೆಕ್ ಯಂತ್ರಗಳ ಜೊತೆಗೆ ಮಿಲ್ಕ್ ಪ್ಲಾನನ್ನು ಸ್ಥಾಪಿಸಿದ್ದಾರೆ.

ಹೆಚ್ಚು ಹಾಲು ಕೊಡುವಂತಾಗಲು ದನಗಳಿಗೆ ಸಂತುಲಿತ ಆಹಾರ ಜೊತೆಗೆ ಅದರ ಉಪಚಾರಕ್ಕೆ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಈ ಫಾರ್ಮ್ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹಲವಾರು ಗ್ರಾಮಸ್ಥರಿಗೆ ಉದ್ಯೋಗ ಸಿಕ್ಕಿದೆ.

ಸರಕಾರದ ಸಹಕಾರವನ್ನು ಅವರು ಬಯಸುತ್ತಿದ್ದಾರೆ. ಆದರೆ ಒಳ್ಳೆಯ ಸ್ಪಂದನೆ ಅವರಿಗೆ ಸಿಕ್ಕಿಲ್ಲ. ಒಂದುವೇಳೆ ಸರಕಾರದ ಸಂಬಂಧಿತ ಇಲಾಖೆ ಇವರತ್ತಗಮನಹರಿಸಿದರೆ ಹೆಚ್ಚು ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಅವರಿಗೆ ಸಾಧ್ಯವಾಗಬಹುದು

Leave a Reply