ಪಾಟ್ನಾ : ಚುನಾವಣಾ ಕಾರ್ಯತಂತ್ರ ಚಾಣಕ್ಯ ಎಂದು ಖ್ಯಾತರಾದ ಪ್ರಶಾಂತ್ ಕಿಶೋರ್ ಇದೀಗ ಸ್ವತಃ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಬಿಹಾರ ಮುಖ್ಯಮಂತ್ರಿಯವರ ನಿಕಟವರ್ತಿಯಾಗಿರುವ ಅವರು ಬಹುತೇಕ ಜೆಡಿಯು ಪಕ್ಷವನ್ನು ಸೇರುವ ಸಾಧ್ಯತೆ ದಟ್ಟವಾಗಿದೆ.

ಆರಂಭದಲ್ಲಿ ನರೇಂದ್ರ ಮೋದಿಗೆ ಚುನಾವಣಾ ರಣತಂತ್ರ ಹೆಣೆದು ಕೊಟ್ಟಿದ್ದ ವರು ನಂತರ ಅವರ ವಿರೋಧಿ ಬಣಕ್ಕೆ ನೆರವಾಗಿದ್ದರು. ಬಿಜೆಪಿ ಸಖ್ಯ ತೊರೆದಿದ್ದ ನಿತೀಶ್ ಕುಮಾರ್ ರವರಿಗೆ ಮಹಾ ಘಟಿಬಂಧನದ ವೇದಿಕೆ ರೂಪಿಸಿ ಮತ್ತೆ ಅಧಿಕಾರಕ್ಕೇರಲು ಮಾರ್ಗೋಪಾಯ ರೂಪಿಸಿದ್ದರು.

2014 ರಲ್ಲಿ ರಾಜಕೀಯ ತಂತ್ರಗಾರಿಕೆ ಕಾರ್ಯ ಕೈಗೆತ್ತಿಕೊಂಡ ಅವರು ನರೇಂದ್ರ ಮೋದಿಯವರೊಂದಿಗೆ ಕೈ ಜೋಡಿಸಿದ್ದರು. ಬಳಿಕ 2018 ರ ಲೋಕಸಭಾ ಚುನಾವಣೆಯಲ್ಲೂ ಸಲಹೆಗಾರನಾಗಿ ಕೆಲಸ ಮಾಡಿದ್ದರು. ಬಳಿಕ ಅಮಿಶ್ ಷ ರೊಂದಿಗೆ ಬಿನ್ನಾಭಿಪ್ರಾಯದ ಕಾರಣದಿಂದ ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು.

Leave a Reply