ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಪ್ರಧಾನಿಯಾಗಿ ಆಯ್ಕೆ ಗೊಂಡರೂ ಒಂದಲ್ಲ ಒಂದು ಸಮಸ್ಯೆ ಇಮ್ರಾನ್ ಖಾನ್ ಗೆ ಎದುರಾಗುತ್ತಿರುವುದು ಸುಳ್ಳಲ್ಲ.

ಇದೀಗ ಇಮ್ರಾನ್‌ ಖಾನ್‌ ಆ.11ರಂದು ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಸಿರುವಂತೆಯೇ, ಜು.25ರ ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಸಂಸತ್‌ನಲ್ಲಿ ತಮ್ಮದೇ ಪ್ರಧಾನಿ ಅಭ್ಯರ್ಥಿ ನಿಯೋಜಿಸಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (ಪಿಎಂಎಲ್‌-ಎನ್‌) ಮತ್ತು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ನಾಯಕರು ಗುರುವಾರ ಈ ಘೋಷಣೆ ಮಾಡಿದ್ದಾರೆ. ಈ ಮೈತ್ರಿಕೂಟ ಅಕ್ರಮ ಚುನಾವಣೆಯ ವಿರುದ್ಧವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮಾನ ಅವಕಾಶ ನೀಡಲಾಗಿಲ್ಲ ಎಂದು ಪಿಎಂಎಲ್‌-ಎನ್‌ ನಾಯಕ ಮರ್ಯಾಮ್‌ ಔರಂಜೇಬ್‌ ಆರೋಪಿಸಿದ್ದಾರೆ.

Leave a Reply