ಪಾರ್ವತಿ ನಾಚಿಕೆ ಸ್ವಭಾವದವಳು. ಮಹೇಶ್ ಗೆ ಸ್ವಲ್ಪ ಕೋಪ ಜಾಸ್ತಿ, ಆಗಾಗ್ಗೆ ಬ್ರಹ್ಮ ಮತ್ತು ವಿಷ್ಣುವಿನೊಂದಿಗೆ ಹೋರಾಡುತ್ತಾನೆ. ಪಂಜಾಬ್‌ ರಾಜ್ಯದ ಲುಧಿಯಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ಪಯಾಲ್ನಲ್ಲಿ ಮುಸ್ಲಿಂ ಮಹಿಳೆ ನಡೆಸುತ್ತಿರುವ ಗೋಶಾಲೆಯ ಕಥೆಯಿದು. ಆ ಗೋಶಾಲೆಯಲ್ಲಿ 33 ಜಾನುವಾರುಗಳಿವೆ.

ಗಾಯಗೊಂಡ ಮತ್ತು ಬೀದಿ ಪಾಲಾದ ಮುದಿ ಗೋವುಗಳನ್ನು ತನ್ನ ಗೋಶಾಲೆಗೆ ತಂದು ಅವುಗಳಿಗೆ ಚಿಕಿತ್ಸೆ ನೀಡಿ ಸಾಕುತ್ತಾರೆ ಎಂದು 33 ವರ್ಷ ಪ್ರಾಯದ ಸಲ್ಮಾ ಹೇಳುತ್ತಾರೆ.

ಆಗಸ್ಟ್ 2007 ರಲ್ಲಿ ಸಲ್ಮಾ ಗಾಯಗೊಂಡ ಕೋಣವನ್ನು ಕಂಡು ಅದನ್ನು ಮನೆಗೆ ತಂದು ಸಾಕಲು ತೊಡಗಿದರು. ಹೀಗೆ ಅವರ ಗೋಶಾಲೆಯ ಪಯಣ ಪ್ರಾರಂಭವಾಯಿತು.  ಆ ಕೋಣಕ್ಕೆ ಅವರು ನಂದಿ ಎಂದು ಹೆಸರಿಸಿದರು. ನಂತರ ಅವರು ಬೀದಿ ಪಾಲಾದ ಹಸುವನ್ನು ತಂದರು. ಅದಕ್ಕೆ ಗೌರಿ ಎಂದು ಹೆಸರಿಸಿದರು. ಶೀಘ್ರದಲ್ಲೇ ಅವರ ಗೋಶಾಲೆ ‘ಮುಸ್ಲಿಂ ಗೌಶಾಲಾ’ ಎಂದು ಹೆಸರುವಾಸಿಯಾಯಿತು. ಸಲ್ಮಾ ಅವಿವಾಹಿತೆ. ಆಕೆಯ ಅಪ್ಪ ನೇಕ್ ಮೊಹಮ್ಮದ್ ಮತ್ತು ಚಿಕ್ಕಮ್ಮ ತೆಜೊ ಅವರ ಪೆನ್ಶನ್ ಹಣದ ಸಹಾಯದಿಂದ ಸಲ್ಮಾ ಈ ಗೋಶಾಲೆಯನ್ನು ನಡೆಸುತ್ತಾರೆ.

ನಿಮ್ಮ ಗೋಶಾಲೆಯನ್ನು ಮುಸ್ಲಿಂ ಗೋಶಾಲೆ ಎಂದು ಕರೆಯುತ್ತಾರೆ? ಎಂದು ಕೇಳಿದಾಗ (‘eh sirf kaat maar sakde ne’)  ಮುಸ್ಲಿಮರಿಗೆ ಕೇವಲ ಪ್ರಾಣಿಗಳನ್ನು ಕಡಿಯಲು ಗೊತ್ತು ಎಂದು ಜನರು ಹೇಳುತ್ತಾರೆ. ಆದರೆ ನಮಗೂ ಹೃದಯವಿದೆ. ನಾವು ಕೂಡಾ ಪ್ರಾಣಿಗಳನ್ನು ಪ್ರೀತಿಸುತ್ತೇವೆ ಎಂದು ಸಲ್ಮಾ ಹೇಳುತ್ತಾರೆ.

33ರ ಹರೆಯದ ಸಲ್ಮಾ ಅವರಿಗೆ ಸುಮಾರು ಆರು ವಿವಾಹ ಸಂಬಂಧಗಳು ಬಂದಿದ್ದವು. ಮುಸ್ಲಿಂ ಮಹಿಳೆಗೆ ಯಾಕೆ ಗೋಶಾಲೆ ಎಂದು ಕೇಳಿ ಹುಡುಗನ ಕಡೆಯವರು ಸಂಬಂಧ ತಿರಸ್ಕರಿಸಿದ್ದೂ ಉಂಟು. ಆದಾಗ್ಯೂ, ಗೋಶಾಲೆಯನ್ನು ನೋಡಿಕೊಳ್ಳುವ ಮನಸ್ಸು ಇರುವ ಹುಡುಗನನ್ನು ಮಾತ್ರ ತಾನು ಮದುವೆಯಾಗುತ್ತೇನೆ ಎಂದು ಸಲ್ಮಾ ಹೇಳುತ್ತಾರೆ.

ನನ್ನ ಕೆಲಸಕ್ಕೆ ಧರ್ಮದೊಂದಿಗೆ ಏನೂ ಸಂಬಂಧ ಇಲ್ಲ. ಪ್ರಾಣಿಗಳ ಮೇಲಿನ ತನ್ನ ಪ್ರೀತಿಯಿಂದ ಎಲ್ಲವನ್ನೂ ಮಾಡುತ್ತಿದ್ದೇನೆ. “ನಾನು ಗೋವನ್ನು ದೇವತೆಯಾಗಿ ಕಾಣುವುದಿಲ್ಲ. ಸಹಾಯಕ್ಕೆ ಅರ್ಹವಾದ ಪ್ರಾಣಿ ಎಂಬ ನೆಲೆಯಲ್ಲಿ ಈ ಕೆಲಸ ಮಾಡುತ್ತಿದ್ದೇನೆ. ನಾನು ಖುರಾನ್ ಮತ್ತು ಅಲ್ಲಾಹನ ಬೋಧನೆಗಳನ್ನು ಅನುಸರಿಸುತ್ತಿದ್ದೇನೆ. ನನ್ನ ಧರ್ಮವು ಪ್ರತಿ ‘ಜೀವವನ್ನು ಗೌರವಿಸಲು ಕರೆ ಕೊಡುತ್ತದೆ’ (ವಾಸಿಸುವ) ಸಹಾಯ ಮಾಡಲು ನನಗೆ ಕಲಿಸುತ್ತದೆ. ಆದರೆ ಜನರು ಹಸುವನ್ನು ಹಣಕ್ಕಾಗಿ ಬಳಸಿ ನಂತರ ಮುದಿ ಪ್ರಾಯವಾದಾಗ ಅವುಗಳನ್ನು ಹೊರದಬ್ಬುತ್ತಾರೆ ಎಂದು ಸಲ್ಮಾ ಖೇದ ವ್ಯಕ್ತ ಪಡಿಸುತ್ತಾರೆ.

ಹಸುಗಳ ಆರೈಕೆಯ ಕಾರಣಕ್ಕಾಗಿ ಇವರ ಕುಟುಂಬ ಸಾಮಾಜಿಕ ಬಹಿಷ್ಕಾರವನ್ನೂ ಎದುರಿಸಬೇಕಾಗಿ ಬಂದಿದೆ.
ಹಸುಗಳ ಆರೈಕೆ ಮಾಡುವುದರಿಂದ ನಾನು ಮುಸ್ಲಿಮೇತರಳಾಗುವುದಿಲ್ಲ. ನಾನು ಸಸ್ಯಾಹಾರಿ. ನಮ್ಮ ಸುತ್ತುಮುತ್ತಲಿನ  ಮುಸ್ಲಿಂ ಕುಟುಂಬದವರು ಅಪರೂಪಕ್ಕೊಮ್ಮೆ ನಮ್ಮಲ್ಲಿ ಮಾತನಾಡಿದರೂ, ಗೋಶಾಲೆಯನ್ನು ಮುಚ್ಚುವಂತೆ ಸಲಹೆ ನೀಡುತ್ತಿರುತ್ತಾರೆ. ನಮ್ಮ ಮನೆಯ ಪಕ್ಕದಲ್ಲಿರುವ ಹಿಂದೂ ಮತ್ತು ಸಿಖ್ ಕುಟುಂಬದವರೂ ಗೋಶಾಲೆಯಿಂದ ಸೆಗಣಿ ಗಬ್ಬು ವಾಸನೆ ಬರುತ್ತಿದೆ ಎಂದು ಕೆಲವೊಮ್ಮೆ ದೂರುತ್ತಾರೆ.

ಹಸುವನ್ನು ಹೊಡೆದು ಸಾಯಿಸಿದರೂ ಅವರಿಗೆ ಏನೂ ಕಾಳಜಿಯಿಲ್ಲ ಎಂದು ನನ್ನ ಅರಿವಿಗೆ ಬಂದ ನಂತರ ನಾನು ನನ್ನ ಹಸುಗಳಿಗೆ ಹಿಂದೂ ದೇವರ ಹೆಸರಿಡುವುದನ್ನು ನಿಲ್ಲಿಸಿದೆ. ಈ ಹಿಂದೆ ನಾನು ಪಾರ್ವತಿ, ಜಗದಂಬಾ, ದುರ್ಗಾ, ಮೀರ, ಸರಸ್ವತಿ, ರಾಧಾ, ಲಕ್ಷ್ಮಿ ಮತ್ತು ತುಳಸಿ ಎಂಬ ಹೆಸರುಗಳನ್ನಿಟ್ಟಿದ್ದೆ. 2012ರ ನಂತರ ನಾನು ಆರೈಕೆ ಮಾಡಿದ ಹಸುಗಳಿಗೆ ಇಝಾಜಾ, ಆಶು, ಗುಲ್ಬದನ್, ಕುಂಕುಮ್, ಹನೀ ಮತ್ತು ಬಾದ್‍ಷಾ ಎಂದು ಹೆಸರಿಟ್ಟಿದ್ದೇನೆ.

ಕಳೆದ ವರ್ಷ 5 ಹಸುಗಳು ಸತ್ತಾಗ ಚರ್ಮ ಸುಲಿಯಲು ಬಿಡದೆ ಹೂತದ್ದಕ್ಕೆ ನನ್ನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಮೊದಲಿಗೆ ಸತ್ತ ಹಸುಗಳನ್ನು ಹೂತು ಹಾಕುವುದಕ್ಕೆ ಜಾಗ ನೀಡಲು ನಿರಾಕರಿಸಿದರು.ಸತ್ತ ಹಸುಗಳ ಚರ್ಮ ಸುಲಿಯುವುದು ನನಗೆ ಇಷ್ಟ ಇಲ್ಲ. ಆನಂತರ ನಾವು ನಮ್ಮ ಜಾಗದಲ್ಲೇ ಹೂತು ಹಾಕಿದೆವು ಎಂದು ಎಂದರು.

ಬೀಫ್ ತಿನ್ನುವವರ ಮೇಲೆ ದಾಳಿ ಮಾಡುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ಕೇವಲ ರಾಜಕೀಯ. ನಿಜವಾಗಿ ದೇಶದ ಪ್ರಮುಖ ಸಮಸ್ಯೆಗಳಾದ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಹಸು ಮತ್ತು ಧರ್ಮವನ್ನು ಬಳಸುತ್ತವೆ ಎಂದಿದ್ದಾರೆ.

Leave a Reply