ಅಗರ್ತಲ: ಮೂರ್ಖತನದ ಹೇಳಿಕೆಗೆ ಪ್ರಸಿದ್ಧನಾದ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ರವೀಂದ್ರನಾಥ್ ಠಾಗೋರ್ ರವರು ತನಗೆ ದೊರೆತ ನೋಬೆಲ್ ಪಾರಿತೋಷಕವನ್ನು ಬ್ರಿಟೀಷರ ವಿರುದ್ಧ ಪ್ರತಿಭಟಿಸಿ ಮರಳಿಸಿದ್ದಾರೆಂದು ಹೇಳಿದ್ದಾರೆ.

ಉದಯಪುರದಲ್ಲಿ ನಡೆದ ಟಾಗೋರ್ ರವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಈ ವಿಚಾರ ತಿಳಿಸಿದರು. ಈಗ ಈ ಭಾಷಣದ ವೀಡಿಯೋ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

1913ರಲ್ಲಿರವೀಂದ್ರನಾಥ್ ಟಾಗೋರ್ ರವರಿಗೆ ಸಾಹಿತ್ಯಕ್ಕಾಗಿ ನೋಬೆಲ್ ಬಹುಮಾನ ದೊರೆತಿತ್ತು. ತನಗೆ ದೊರೆತ ಸರ್ ಪದವಿಯನ್ನು 1919ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ವಿರುದ್ಧ ಪ್ರತಿಭಟಿಸಿ ತೊರೆದಿದ್ದರು. ಇದನ್ನೇ ತ್ರಿಪುರ ಮುಖ್ಯಮಂತ್ರಿ ನೋಬೆಲ್ ಬಹುಮಾನವಾಗಿ ಬದಲಾಯಸಿದ್ದಾರೆ.

Leave a Reply