ರಾಜಸ್ಥಾನ ಪೋಲೀಸರ ಈ ಕಾರ್ಯ ನಿಜಕ್ಕೂ ಪ್ರಶಂಸಾರ್ಹವಾಗಿದೆ. ಗ್ರಾಮೀಣ ಬಡ ಯುವತಿಯ ಮದುವೆಗೆ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಮದುವೆಯ ಪ್ರಾಯೋಜಕತ್ವ ಮತ್ತು ಎಲ್ಲಾ ಕಾರ್ಯಗಳನ್ನು ಅವರೇ ವಹಿಸಿಕೊಂಡಿದ್ದಾರೆ.

ಮಮ್ತಾ ಮಹಾವರ್ ಎಂಬ ಗ್ರಾಮೀಣ ಬಡ ಹುಡುಗಿಯ ಮದುವೆಯನ್ನು ಟೋಂಕ್ ಜಿಲ್ಲೆಯ ದಾತ್ವಾಸ್ ಪೊಲೀಸ್ ಠಾಣೆಯಲ್ಲಿ ಆಯೋಜಿಸಿ ಮಾನವೀಯತೆ ಮೆರೆದಿದ್ದಾರೆ.

ಟೋಂಕ್ ಜಿಲ್ಲೆಯ ಹಿಂದುಳಿದ ಪ್ರದೇಶದ ಗ್ರಾಮದ ಮಮ್ತಾ ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡಿದ್ದಳು. ಎರಡು ವರ್ಷಗಳ ಹಿಂದೆ ಏಕೈಕ ಸಹೋದರ ಅನಾರೋಗ್ಯ ಪೀಡಿತನಾಗಿ ಮರಣ ಹೊಂದಿದರು. ಸಹೋದರ ಮಾಡಿದ ಸಾಲವನ್ನು ತೀರಿಸಲು ಮಮ್ತಾ MGNREGA ಯಲ್ಲಿ ದುಡಿಯಬೇಕಾದ ಸನ್ನಿವೇಶ ಎದುರಾಯಿತು.

ಇದೀಗ ರಾಜಸ್ಥಾನ ಪೊಲೀಸರು ಆಕೆಯ ನೆರವಿಗೆ ಧಾವಿಸಿದ್ದು, ಆಕೆಯ ಮದುವೆಗೆ ಹಣ ಸಂಗ್ರಹ ಮಾಡಿದ್ದಾರೆ.
ಮದುವೆಯನ್ನು ಸುಂದರ ಸುಸೂತ್ರವಾಗಿ ಪೊಲೀಸ್ ಠಾಣೆಯಲ್ಲಿ ಆಯೋಜಿದ್ದು, ಮದುವೆಯ ಫೋಟೋ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Reply