ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿದ್ದೆಯಿಂದ ಎಲ್ಲರು ಎದ್ದು ಬಂದಂತೆ ಕಾಣುತ್ತದೆ. ‌ಪರಸ್ಪರ ಆರೋಪ ಪ್ರತ್ಯಾರೋಪಗಳ ಮಳೆಗಳು ಶುರುವಾಗಿದೆ. ಅಂತೆಯೇ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ನಟಿ ರಮ್ಯಾ ಅವರು ಕೂಡ ಮತ್ತೆ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದಾರೆ.

ನಾವೆಲ್ಲರೂ ತಪ್ಪು ಮಾಡುತ್ತೇವೆ ಹಾಗಾಗಿ ಪ್ರಧಾನಿ ಮೋದಿಜಿ ಕೂಡ ತಪ್ಪು ಮಾಡಿದ್ದಾರೆ ಎಂದು ಮೋದಿಯನ್ನು ವ್ಯಂಗ್ಯ ಮಾಡುವ ವಿಡಿಯೋ ಒಂದನ್ನು ಸ್ಯಾಂಡಲ್‌ವುಡ್ ಕ್ವೀನ್‌ ರಮ್ಯಾ ತಮ್ಮ ಪೇಜಲ್ಲಿ ಹಾಕುವ ಮೂಲಕ ಮೋದಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮೋದಿಯವರನ್ನು ಕೆಣಕುತ್ತಾ ಹೋದ ಅನುಪಮಾ ಶೆಣೈ ಸದ್ಯ ರಿಲೀಫ್ ತಗೊಂಡು ರಮ್ಯಾಗೆ ಅದನ್ನು ವಹಿಸಿಕೊಟ್ಟಿದ್ದಾರೆ ಎನ್ನುವಂತೆ ರಮ್ಯಾ ಮತ್ತೆ ಮೋದಿ ವಿರುದ್ಧ ಲೇವಡಿ ಪೋಸ್ಟ್‌ಗಳನ್ನು ಮುಂದುವರೆಸಿದ್ದಾರೆ.

 

Leave a Reply