ಬಂಟ್ವಾಳ: ಯುವಕರು ಸಮಾಜಕ್ಕೆ ಆದರ್ಶವಾಗಬೇಕು. ಯುವ ಶಕ್ತಿ ದೇಶದ ನಿಜವಾದ ಶಕ್ತಿ ಎಂದೆಲ್ಲಾ ನಾವು ಕೇಳುತ್ತೇವೆ. ಆದರೆ ಕೆಲವೊಮ್ಮೆ ಅದು ಭಾಷಣ ಹೇಳಿಕೆಗಳಿಗೆ ಸೀಮಿವಾಗಿ ಬಿಡುತ್ತದೆ. ಆದರೆ ಬೊಳ್ಳಾಯಿಯ ಯುವ ಸಂಘವೊಂದು ಅದಕ್ಕೆ ಒಂದು ಮಾದರಿ ಯೋಗ್ಯ ಕಾರ್ಯಕ್ರಮ ಮಾಡಿದೆ.

ಯುವ ಫ್ರೆಂಡ್ಸ್ ಬೊಳ್ಳಾಯಿ ಇದರ ಆಶ್ರಯದಲ್ಲಿ ಜರಗಿದ ಪ್ರಥಮ ವರ್ಷದ ಹಗ್ಗ ಜಗ್ಗಾಟ ಪಂದ್ಯಾಟವು ಬೊಳ್ಳಾಯಿಯಲ್ಲಿ ಯಶಸ್ವಿಯಾಗಿ ನಡೆದಿದೆ.

ಈ ಆಟ ಬರೀ ಆಟವಾಗಿ ಉಳಿಯದೆ, ಇದರಲ್ಲಿ ಸಂಗ್ರಹವಾದ ಎಲ್ಲಾ ಹಣವನ್ನು ಊರಿನ ಮೂರೂ ಧರ್ಮದ ಅಸಹಾಯಕರನ್ನು ಗುರುತಿಸಿ ಸಮಾನವಾಗಿ ಹಂಚಿ, ಧಾನ ಮಾಡುವ ಕಾರ್ಯವು ಇದೇ ವೇಳೆಯಲ್ಲಿ ಯುವ ಫ್ರೆಂಡ್ಸ್ ಬೊಳ್ಳಾಯಿ ಯುವಕರಿಂದ ನಡೆಯಿತು.

ಸಹಾಯ ಸ್ವೀಕರಿಸಲ್ಪಟ್ಟ ಆಯಾ ವ್ಯಕ್ತಿಗಳ ಹೆಸರು ಹಾಗೂ ಕಾರಣದ ಬಗ್ಗೆ ಮಾಹಿತಿ ಇಲ್ಲಿದೆ.

1. ಹರೀಶ ಪಟ್ಟುಗುಡ್ಡೆ : ಇವರಿಗೆ ಪಾರಲಿಸಿಸ್ ಸಂಭವಿಸಿದೆ. ಇವರು ವಿವಾಹಿತರಾಗಿದ್ದು ಒಂದು 4 ವರ್ಷದ ಮಗುವು ಇದ್ದು, ಇವರಿಗೆ ನಿತ್ಯ ಜೀವನವನ್ನು ಸಾಗಿಸಲು ಕಷ್ಟಕರವಾಗಿದೆ. ಹೀಗಾಗಿ ಮುಂದೆ ಈ ಮಗುವಿನ ವಿದ್ಯಾಭ್ಯಾಸದ ಖರ್ಚು ಭರಿಸಲು ತುಂಬಾ ಕಷ್ಟಕರವಾಗಿದ್ದರಿಂದ ಯುವ ಫ್ರೆಂಡ್ಸ್ ಇವರಿಗೆ ಸಹಾಯ ಹಸ್ತ ನೀಡಿದೆ.

2. ಇಸಾಕ್ ನಗ್ರಿ ಮೂಲೆ ಇವರ ಕುಟುಂಬ : ಇಸಾಕ್‌ರವರ ಕುಟುಂಬ ಕಡು ಬಡತನದಲ್ಲಿದ್ದು ಅವರ ಅಕ್ಕ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಔಷಧಿಯ ಖರ್ಚು ವ್ಯಯಿಸಲು ಸಾದ್ಯವಾಗದಷ್ಟು ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ. ಇಸಾಕ್‌ರವರ ಒಬ್ಬರ ದುಡಿಮೆಯಲ್ಲಿ ಒಂದು ಅಕ್ಕ, ತಂಗಿ, ಅಮ್ಮ ಇವರ ದಿನನಿತ್ಯದ ಕರ್ಚು ವ್ಯಯಿಸಲು ಕಷ್ಟವಾಗಿದ್ದು, ಈ ನಿಟ್ಟಿನಲ್ಲಿ ಯುವ ಫ್ರೆಂಡ್ಸ್ ಸಹಾಯ ಹಸ್ತವನ್ನು ನೀಡಿದೆ.

3. ಅಲಿಸಾ ಡಿಸೋಜ : ಅಲಿಸಾ ಡಿಸೋಜ ಇವರು ಪತಿಯನ್ನು ಕಳೆದುಕೊಂಡ ನಂತರ ತನ್ನ ಎರಡು ಮಕ್ಕಳ ಜವಾಬ್ದಾರಿಯನ್ನು ಕಷ್ಟದಲ್ಲಿ ನಿಭಾಯಿಸುತ್ತಿದ್ದರು. ನಂತರ ವಿಧಿಯ ಕ್ರೂರ ಆಟಕ್ಕೆ ಬಲಿಯಾದ ಇವರು ತನ್ನ ಎರಡು ಮಕ್ಕಳನ್ನು ಅನಾಥರನ್ನಾಗಿ ಮಾಡಿ ಅಗಲಿದ್ದಾರೆ. ಆ ಎರಡು ಮುಗ್ದ ಮಕ್ಕಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಯುವ ಫ್ರೆಂಡ್ಸ್ ಸಹಾಯ ಹಸ್ತ ನೀಡಿದೆ.

ಇಂತಹ ಹಲವಾರು ರೀತಿಯ ಉತ್ತಮ ಸಮಾಜಮುಖಿ ಕಾರ್ಯಗಳು ಮುಂದೆಯೂ ನಾವು ಮಾಡಲಿದ್ದೇವೆ ಎಂದು ಯುವ ಫ್ರೆಂಡ್ಸ್ ಬೊಳ್ಳಾಯಿಯ ಕಾರ್ಯಕರ್ತರು ಸಂತೋಷದಿಂದು ಹೇಳುತ್ತಾರೆ.ಇಂತಹ ಸಮಾಜಮುಖಿ ಸೌಹಾರ್ದ ಕಾರ್ಯಕ್ರಮ ನಮ್ಮ ಎಲ್ಲಾ ಯುವಕರಿಂದ ನಡೆಯ ಬೇಕು ಎಂದು ನಾವು ಆಪೇಕ್ಷಿಸುತ್ತೇವೆ ಎಂದು ಬೊಳ್ಳಾಯಿ ಫ್ರೆಂಡ್ಸ್ ಹೇಳಿದೆ.

Leave a Reply