ಮಾಸ್ಕೋ: ವಿಶ್ವಕಪ್ ಫುಟ್ಬಾಲ್ ಸ್ಪರ್ಧೆಗೆ ಸಂಬಂಧಿಸಿದ ವರದಿ ಮಾಡುತ್ತಿರುವಂತೆ ವರದಿಗಾರ್ತಿಯನ್ನು ಬಹಿರಂಗವಾಗಿ ಯುವಕನೋರ್ವ ಚುಂಬಿಸಿದ ಘಟನೆ ನಡೆದಿದೆ.

ಜರ್ಮನಿಯ ಡಚ್ ವಲ್ ಲೇ ಎಂಬ ಚಾನೆಲ್ ವರದಿಗಾರ್ತಿ ಜೂಲಿತ್ ಗೋನ್ಸಾಲೆಸ್ ತೇರನ್ ಎಂಬವರ ಜೊತೆ ಅನಾಗರಿಕವಾಗಿ ವರ್ತಿಸ ತೊಡಗಿದ ಯುವಕನೋರ್ವ ಆಕೆಯನ್ನು ಚುಂಬಿಸಿದ. ಆದರೆ ಅದನ್ನು ಲೆಕ್ಕಿಸದೆ ಆಕೆ ತನ್ನ ಕರ್ತವ್ಯ ನಿಭಾಯಿಸಿದ್ದಳು.

ಬಳಿಕ ಇನ್ ಸ್ಟಗ್ರಾಮ್ ಪೇಜಲ್ಲಿ ಈ ವೀಡಿಯೋವನ್ನು ಬಹಿರಂಗಪಡಿಸಿ. ಗೌರವಿಸಿರಿ. ! ಇದು ನಮಗೆ ಹೇಳಿ ಮಾಡಿಸಿದ್ದಲ್ಲ. ಮೌಲ್ಯಯುತವಾಗಿ ವರ್ತಿಸಿ. ನಾವು ಫುಟ್ಬಾಲಿನ ಸಂತೋಷ ಹಂಚಿಕೊಳ್ಳೋಣ. ಆದರೆ ಪ್ರೀತಿ ಸ್ನೇಹದ ಕಿರುಕುಳದ ನಡುವಿನ ವ್ಯತ್ಯಾಸ ಅರಿಯಬೇಕು ಎಂದು ಅವರು ಹೇಳಿದ್ದಾರೆ. ಈ ಹಿಂದೆ ಕಳೆದ ವರ್ಷ ಬ್ರೆಝಿಲ್ ವರದಿಗಾರ್ತಿ ಬ್ರೂನಾ ಡಾಲ್ಟರ್ ಇಂತಹದ್ದೇ ಅನುಭವವಾದದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply