ವಾಷಿಂಗ್ಟನ್: ಭಾರತ ಮತ್ತು ಬ್ರೆಝಿಲ್ ನ ಮಹಾಚುನಾವಣೆಯಲ್ಲಿಯೂ ರಶ್ಯಾ ಹಸ್ತಕ್ಷೇಪವುಂಟು ಮಾಡುವ ಸಾಧ್ಯತೆಯಿದೆಯೆಂಬ ಸೂಚನೆ ಲಭ್ಯವಾಗಿದೆ. ಸಾಮಾಜಿಕ ಜಾಲತಾಣಗಳ ಮತ್ತು ವಾರ್ತಾ ಮಾಧ್ಯಮಗಳ ಮೂಲಕ ಕೈಚಳಕ ತೋರಿಸಲಿದೆಯೆಂದು ವರದಿಯಲ್ಲಿ ಹೇಳಲಾಗಿದೆ.

ಆಕ್ಸ್‌ಫರ್ಡ್ ವಿ.ವಿಯ ಸಾಮಾಜಿಕ ಜಾಲತಾಣಗಳ ತಜ್ಞ ಫಿಲಿಪ್. ಎನ್ ಹೊವಾರ್ಡ್ ಈ ಎಚ್ಚರಿಕೆಯೊಂದಿಗೆ ರಂಗಕ್ಕಿಳಿದಿದ್ದಾರೆ.

ಅಮೇರಿಕದಂತೆಯೇ ಸಂಘಟಿತವಾಗಿ ಮಾಧ್ಯಮ ಒಕ್ಕೂಟಗಳು ನೆಲೆ ನಿಂತಿರದ ಕಾರಣ ಭಾರತ ಮತ್ತು ಬ್ರೆಝಿಲ್ ಮಾಧ್ಯಮಗಳ ಮೇಲೆ ಪ್ರಭಾವ ಬೀರಲು ಸುಲಭವಾಗುವುದು. ವಿಶ್ವದಲ್ಲಿ ಅತ್ಯಂತ ಪ್ರಬಲ ಮಾಧ್ಯಮಗಳಲ್ಲಿ ಅಮೇರಿಕವೂ ಒಂದು. ಭಾರತ ಮತ್ತು ಬ್ರೆಝಿಲ್ ಮಾಧ್ಯಮಗಳು ಅಷ್ಟೇನೂ ಪಕ್ವತೆಯಿಲ್ಲದ ಕಾರಣ ರಶ್ಯಾದ ಈ ಕಾರ್ಯ ಅಪಾಯಕಾರಿಯಾದುದಾಗಿದೆಯೆಂದು ಹೊವಾರ್ಡ್ ಹೇಳಿದರು.

ಅಮೇರಿಕದ ನಂತರ ಇತರ ದೇಶಗಳೆಡೆಗೆ ಕಣ್ಣು ಹಾಯಿಸಿದ ರಶ್ಯಾ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿರುವ ಭಾರತ ಮತ್ತು ಬ್ರೆಝಿಲನ್ನು ಗುರಿಯಾಗಿರಿಸಿದ್ದಾರೆ. ಕಳೆದ ಅಮೇರಿಕಾದ ಚುನಾವಣೆಯಲ್ಲಿ ಅವರ ಹಸ್ತಕ್ಷೇಪದ ಕುರಿತು ತನಿಖೆಗೆ ನೇಮಿಸಲ್ಪಟ್ಟ ಅಮೇರಿಕನ್ ಸೆನೆಟ್ ಆಂಡ್ ಹೌಸ್ ಇಂಟೆಲಿಜೆಂಟ್ ಕಮಿಟಿಯು ಬಹಿರಂಗಗೊಳಿಸಿದ ವರದಿಯ ಆಧಾರದಲ್ಲಿ ಇದು ಸ್ಪಷ್ಟವಾಗಿದೆ ಎಂದು ಹೇಳಿದ ಹೋವಾರ್ಡ ಹೆಚ್ಚಿನ ಮಾಹಿತಿ ನೀಡಲು ಹಿಂಜರಿದ್ದಾರೆ.

Leave a Reply