ಬದೌನ್: ಬದೌನ್ ಜಿಲ್ಲೆಯ ದುಗ್ರಾಯಿಯ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಯ ವಿರುದ್ಧ ದಲಿತರು ಪ್ರತಿಭಟನೆ ಮಾಡಿದ್ದಾರೆ. ಅಂಬೇಡ್ಕರ್ ಪ್ರತಿಮೆ ಕೇಸರೀಮಯವಾಗಿದ್ದೇ ಇದಕ್ಕೆ ಕಾರಣ.

ಇತ್ತೀಚೆಗೆ ಉತ್ತರ ಪ್ರದೇಶದ ದುಗ್ರೈಯ್ಯ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ನಂತರ ಅಲ್ಲಿ ಬಹಳ ವಿವಾದಗಳು ತಲೆದೋರಿದ್ದವು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊಸ ಪ್ರತಿಮೆ ಪ್ರತಿಷ್ಠಾಪಿಸಿತ್ತು. ಹೊಸ ಪ್ರತಿಮೆ ಪೂರ್ಣ ಕೇಸರಿಬಣ್ಣದಿಂದ ತುಂಬಿದ ಕಾರಣ ಸ್ಥಳೀಯ ಬಿಎಸ್ಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಪ್ರತಿಮೆಗೆ ನೀಲಿ ಬಣ್ಣ ಬಳಿಯಲಾಗಿದೆ.

ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಯ ಮುಖಂಡರು ಮತ್ತು ಸ್ಥಳೀಯರ ಉಪಸ್ಥಿತಿಯಲ್ಲಿ ನೀಲಿ ಬಣ್ಣ ಬಳಿಯಲಾಗಿದೆ.

“ಪ್ರತಿಮೆಗೆ ಬಣ್ಣ ಬಳಿದು ಪುನಃಸ್ಥಾಪಿಸುವ ನಿರ್ಧಾರವನ್ನು ದಲಿತ ಸಮುದಾಯದ ಸದಸ್ಯರು ಮತ್ತು ಬಿಎಸ್ಪಿಯಹಮೀಂದ್ರ ಗೌತಮ್ ರವರು ಒಟ್ಟಿಗೆ ತೆಗೆದುಕೊಂಡಿದ್ದಾರೆ” ಎಂದು ದುಗ್ರಾಯಿಯ ಗ್ರಾಮದ ಮುಖ್ಯಸ್ಥೆ ಝೈನಬ್ ಬಿ ಹೇಳಿದರು.

Leave a Reply