ರೆಲ್ವೆ ಹಳಿ ದಾಟುವಾಗ ಅದೆಷ್ಟೋ ಮಂದಿ ಅಪ್ಪಿ ತಪ್ಪಿ ರೈಲಿನಡಿಗೆ ಬಿದ್ದು ಸಾಯುತ್ತಾರೆ. ಇತ್ತೀಚೆಗೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಎಂಬಲ್ಲಿ ತಾಯಿ ಮಗು ರೈಲಿನಡಿಗೆ ಬಿದ್ದು ಮೃತಪಟ್ಟಿದ್ದರು.
ಆದರೆ ಇಲ್ಲಿ ಜೀವದ ಹಂಗು ತೊರೆದು ಮಹಿಳೆಯ ಪ್ರಾಣ ಉಳಿಸಿದ ಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಇಂದು ಚನ್ನಪಟ್ಟಣದ ರೈಲ್ವೆನಿಲ್ದಾಣದಲ್ಲಿ ನಡೆದ ಭಯಂಕರ ಹಾಗೂ ಮೈ ನವಿರೇಳಿಸುವ ಘಟನೆ ನಡೆದಿದೆ.

ಬೆಂಗಳೂರಿನಿಂದ “ಟಿಪ್ಪು ಎಕ್ಸ್ ಪ್ರೆಸ್” ಗಾಡಿಯು ವೇಗವಾಗಿ ಬರುತ್ತಲಿತ್ತು..ಮಳೂರುಪಟ್ಟಣದ ಮಂಗಳಮ್ಮ ಎನ್ನುವವರು ಎರಡು ಮಕ್ಕಳನ್ನು ಎರಡೂ ಕಡೆ ಎತ್ತಿಕೊಂಡು ಹಳಿದಾಟಲು ಬೇಡ ಬೇಡ ಎಂದು ಕೂಗಿಕೊಂಡರೂ ದಾಟಲು ಹೊರಟೇಬಿಟ್ಟಳು..

ಕ್ಷಣಮಾತ್ರದಲ್ಲಿ ಸಿಕ್ಕಿಹಾಕ್ಕೊಬೇಕು..ಮಕ್ಕಳನ್ನು ಆಚೆಕಡೆಯ ಫ್ಲಾಟ್ ಫಾರಂನವರು ಎಳೆದುಕೊಂಡರು..ಆದರೆ ಮಹಿಳೆ ಮಂಗಳಮ್ಮ ಸಿಕ್ಕೇ ಹಾಕಿಕೊಂಡರು ಎಂದು ಹೋ!!! ಎಂದು ಕಿರುಚಿದರು..

ಹಿಂದೆ ಪ್ರವೇಶದ್ವಾರ ಎದುರಿನ ಫ್ಲಾಟ್ ಫಾರಂ ನಿಂತಿದ್ದ ಚನ್ನಪಟ್ಟಣದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಮೈಸೂರು ಮೂಲದ ಮಲ್ಲಿಕಾರ್ಜುನ್ ಎಂಬ ಯುವಕ ತನ್ನ ಪ್ರಾಣದ ಹಂಗನ್ನು ತೊರೆದು ಫ್ಲಾಟ್ ಫಾರಂನಿಂದ ಟ್ರ್ಯಾಕ್ ಗೆ ಜಿಗಿದು ಒಂದು ಟ್ರ್ಯಾಕನ್ನು ದಾಟಿ ಪಕ್ಕದ ಟ್ರ್ಯಾಕನ್ನು ದಾಟಿ ಮಹಿಳೆಯನ್ನು ಎರಡೂ ಕೈಗಳಿಂದಹಿಡಿದು ಎತ್ತಿಕೊಂಡು ಬಂದ ಕ್ಷಣಮಾತ್ರದಲ್ಲಿ ರೈಲು ಪಾಸ್ ಅಯಿತು..

ಅಲ್ಲಿದ್ದವರಿಗೆ ಜೀವ ಒಮ್ಮೆ ಹೋಗಿ ಮತ್ತೆ ಬಂದಂತಾಯ್ತು..ಆ ಜೀವದ ಹಂಗು ತೊರೆದು ಮಹಿಳೆಯ ಪ್ರಾಣ ಕಾಪಾಡಿದ ಮಲ್ಲಿಕಾರ್ಜುನ್ ರವರಿಗೆ ನನ್ನದೊಂದು ಸಲಾಮ್…ಇವರೇ ಮಲ್ಲಿಕಾರ್ಜುನ್ ರವರು…

ಲೇಖಕರು : ಸುರೇಶ್ ಗೌಡ

Leave a Reply