ಹೈ ಸೆಕ್ಯೂರಿಟಿ ಜೈಲಿನ ಕೊಠಡಿಯೊಳಗಿಂದಲೇ ವಿಡಿಯೋವನ್ನು ಚಿತ್ರಿಕರಿಸಿ ತನ್ನ ಜೇವಕ್ಕೆ ಬೆದರಿಕೆ ಇದೆ ಎಂದು ಹೇಳಿಕೊಂಡಿರುವ ಶಂಭೂಲಾಲ್ ರೇಗರ್ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜೈಲಿನ ಕಾರ್ಯಚಟುವಟಿಕೆಗಳ ಕುರಿತು ಹಾಗೂ ಅಧಿಕಾರಿಗಳ ಕುರಿತು ಸಂಶಯವನ್ನು ಹುಟ್ಟು ಹಾಕಿದೆ.

ಅಷ್ಟಕ್ಕೂ ಜೈಲಿನ ಹೈ ಸೆಕ್ಯುರಿಟಿ ಸೆಲ್ ಗಳಲ್ಲಿ ಶಂಭೂಲಾಲ್ ಗೆ ಮೊಬೈಲ್ ಫೋನ್ ಹೇಗೆ ಲಭಿಸಿತು ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರಲ್ಲಿ ಮನೆ ಮಾಡಿದೆ.

Image result for shambhu lal regar

ಪಶ್ಚಿಮ ಬಂಗಾಳ ಮೂಲದ ಮುಸ್ಲಿಮ್ ಕಾರ್ಮಿಕನನ್ನು ಬರ್ಬರವಾಗಿ ಹತ್ಯಗೈದು ಶಂಭೂಲಾಲ್ ರೇಗರ್ ಆತನನ್ನು ದಹಿಸಿ ಲವ್ ಜಿಹಾದಿಗಳಿಗೆ ಎಚ್ಚರಿಕೆ ಎಂಬ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದನು.

ತದನಂತರ ಶಂಭೂಲಾಲ್ ನನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದರು.

ಜೈಲಿನಲ್ಲಿ ತನಗೆ ಜೀವ ಬೆದರಿಕೆ ಇರುವ ಕುರಿತು ಆತ ವಿಡಿಯೋ ದಲ್ಲಿ ಹೇಳಿಕೊಂಡಿದ್ದು ತಾನು ಮಾಡಿದ ಕೃತ್ಯದ ಕುರಿತು ಆತನಿಗೆ ಯಾವುದೇ ರೀತಿಯ ಪಶ್ಚಾತ್ತಾಪ ಇಲ್ಲವೆಂದು ಹೇಳಿಕೊಂಡಿದ್ದಾನೆ.

ಪೋಲಿಸರು ತದನಂತರ ಸೆಲ್ ಅನ್ನು ತಪಾಸಣೆಗೊಳಪಡಿಸಿದರಾದರೂ ಅವರಿಗೆ ಮೊಬೈಲ್ ಫೋನ್ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

Leave a Reply