ಇತ್ತೀಚೆಗೆ ಕೇರಳದಲ್ಲಿ ನಡೆದ ಆದಿವಾಸಿ ವ್ಯಕ್ತಿಯನ್ನು ಕಟ್ಟಿ ಕೊಲೆ ಮಾಡಿದ ಘಟನೆ ದೇಶದಾದ್ಯಂತ ಸಂಚಲನ ಮೂಡಿಸುತ್ತಿದ್ದಂತೆ ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿ ಮುಜುಗರಕ್ಕೀಡಾಗಿದ್ದಾರೆ.

“ಮಧು 1 ಕೆಜಿ ಅಕ್ಕಿ ಕದ್ದ. ಉಬೈದ್, ಹುಸೇನ್ ಮತ್ತು ಅಬ್ದುಲ್ ಕರೀಂ ಎಂಬವರು ಥಳಿಸಿ ಆ ಬಡ ಬುಡಕಟ್ಟು ವ್ಯಕ್ತಿಯನ್ನು ಕೊಂದರು. ಇದು ಒಂದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ. ಇಂತಹ ಘಟನೆ ನಡೆಯುತ್ತಲೇ ಇದೆ ಆದರೆ ಕುಚ್ ಫರಕ್ ನಹಿ ಪಡ್ತಾ” ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಬಳಿಕ ಸೆಹ್ವಾಗ್ ರವರನ್ನು ಸಾಮಾಜಿಕ ಮಾಧ್ಯಮದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಧರ್ಮದ ಆಧಾರದಲ್ಲಿ ಈ ಪ್ರಕರಣ ನೋಡಿದ್ದು ತಪ್ಪು ಎನ್ನುವ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಬರತೊಡಗಿತು. ನಾವು ಭಾರತೀಯ ತಂಡವನ್ನು ಧರ್ಮದ ಆಧಾರದಲ್ಲಿ ನೋಡಿಲ್ಲ ಎನ್ನುವ ಟೀಕೆಗಳು ಬಂದಿದ್ದವು.

ನಂತರ ಸೆಹ್ವಾಗ್ ಪುನಃ ಟ್ವೀಟ್ ಮಾಡಿ ಕ್ಷಮೆ ಕೋರಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳ ಹೆಸರನ್ನು ಬರೆಯುವಾಗ ಸರಿಯಾದ ಮಾಹಿತಿ ಇಲ್ಲದೆ ಒಂದು ಹೆಸರನ್ನು ಬಿಟ್ಟಿದ್ದೇನೆ. ಆದ್ದರಿಂದ ಟ್ವೀಟ್ ಮಾಡಿದ್ದಕ್ಕೆ ನಾನು ಕ್ಷಮೆ ಕೋರುತ್ತೇವೆ. ಆ ಟ್ವೀಟ್ ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಕೊಲೆಗಡುಕರು ಧರ್ಮದ ಆಧಾರದಲ್ಲಿ ಬೇರೆ ಬೇರೆಯಾಗಿದ್ದರೂ ಹಿಂಸಾತ್ಮಕ ಮನಸ್ಥಿತಿಯಲ್ಲಿ ಒಂದಾಗಿದ್ದಾರೆ ಎಂದು ಬರೆದು ಆಕ್ರೋಶವನ್ನು ಟ್ವೀಟ್ ಮಾಡಿದ್ದಾರೆ.

Leave a Reply