ಚಾಮರಾಜನಗರ: ಮನೆಯಲ್ಲಿ ಹಾವೊಂದು 3 ನಿಮಿಷಗಳ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನಿಟ್ಟ ಆಶ್ಚರ್ಯಕಾರಿ ಘಟನೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಸ್ನೇಕ್ ಮಹೇಶ್ ಮತ್ತು ಗ್ರಾಮಸ್ಥರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಇದು ಚಕ್ಕರ್ ಕಿಲ್ ಬ್ಯಾಕ್ ಜಾತಿಗೆ ಸೇರಿದ ಹಾವು ಎನ್ನಲಾಗಿದೆ.

ಮಹದೇವಪ್ಪ ಎಂಬುವವರ ಮನೆಯಲ್ಲಿ ಹಾವೊಂದು ಬಂದಿರುವ ಮಾಹಿತಿ ಮೇರೆಗೆ ಸ್ನೇಕ್ ಮಹೇಶ್ ಹಾವನ್ನು ಹಿಡಿದು ತಮ್ಮ ಮನೆಗೆ ಕೊಂಡು ಹೋಗಿದ್ದರು. ಅಲ್ಲಿ ಅದು ಬರೀ ಮೂರು ನಿಮಿಷಗಳಲ್ಲಿ ನೂರಾರು ಮೊಟ್ಟೆಗಳನ್ನು ಇಟ್ಟಿದೆ ಎಂದು ಅವರು ಹೇಳಿದ್ದಾರೆ.

ಇಂತಹ ಹಾವುಗಳು ಸಾಧಾರಣವಾಗಿ 50 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಆದರೆ ಅದಕ್ಕೆ ಕೆಲವು ಗಂಟೆಗಳು ಬೇಕು. ಆದರೆ ಇದೊಂದು ವಿಶಿಷ್ಟವಾಗಿದೆ. ಹಾವು ಮತ್ತು ಮೊಟ್ಟೆಗಳನ್ನು ಸ್ವತಃ ಮನೆಯಲ್ಲಿ ರಕ್ಷಿಸಿ ಅವು ಮರಿಯಾದ ಬಳಿಕ ಕಾಡಿಗೆ ಬಿಡುವುದಾಗಿ ಸ್ನೇಕ್ ಮಹೇಶ್ ತೀರ್ಮಾನಿಸಿದ್ದಾರೆ.

Leave a Reply