ಇಂಡೋನೇಷ್ಯಾದಲ್ಲಿ ತಾಯಿ ಮತ್ತು ಮಗನ ಮರಣ ಒಂದೇ ದಿನ ನಡೆದ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ತನ್ನ ತಾಯಿಯ ಮರಣದ ನಂತರ ಶವಸಂಸ್ಕಾರದ ಸಮಯದಲ್ಲಿ ಶವಪೆಟ್ಟಿಗೆಯು ಮಗನ ಮೇಲೆ ಬಿದ್ದ ಪರಿಣಾಮವಾಗಿ ಆತ ಸಾವಿಗೀಡಾಗಿದ್ದಾನೆ.

ಡೈಲಿ ಮೇಲ್ ವರದಿ ಪ್ರಕಾರ, ಈ ಘಟನೆ ಉತ್ತರ ಟೊರ್ಜಾ ಜಿಲ್ಲೆಯಲ್ಲಿ ನಡೆದಿದ್ದು, ದುರ್ಘಟನೆಯಲ್ಲಿ ಮೃತ್ಯುಗೀಡಾದ ವ್ಯಕ್ತಿಯನ್ನು ಸ್ಯಾಮೆನ್ ಕೊಂಡುರುರಾ ಎಂದು ಗುರುತಿಸಲಾಗಿದೆ.

40 ವರ್ಷದ  ಸ್ಯಾಮೆನ್ ತನ್ನ ತಾಯಿ ಬರ್ಟಾ ಅವರ ಅಂತ್ಯಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಶವ ಪೆಟ್ಟಿಗೆಯನ್ನು ಎತ್ತರಕ್ಕೆ ಕೊಂಡೊಯ್ಯುವ ವೇಳೆ ಮೆಟ್ಟಿಲು ಹತ್ತುವ ವೇಳೆ ಅವಘಡ ಸಂಭವಿಸಿತ್ತು. ಹೊತ್ತುಕೊಂಡಿದ್ದ ಭಾರದ ಶವಪಟ್ಟಿಗೆ ಕೆಳಗೆ ಬಿತ್ತು. ಆ ವೇಳೆ ಪೆಟ್ಟಿಗೆಯನ್ನು ಎತ್ತಿದಾಗ ಅದರ ಅಡಿಯಲ್ಲಿ ಸ್ಯಾಮೆನ್ ಸಿಲುಕಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗಲೇ ಅವರು ಮರಣ ಹೊಂದಿದ್ದಾಗಿ ಡಾಕ್ಟರ್ ತಿಳಿಸಿದರು ಎಂದು ಪೊಲೀಸ್ ಮುಖ್ಯ ಆಯುಕ್ತ ಜೂಲಿಯಾ ಸೆರೆಟ್ ಹೇಳಿದ್ದಾರೆ. ನಂತರ ತಾಯಿ ಜೊತೆಗೆ ಮಗನನ್ನು  ದಫನ ಮಾಡಲಾಯಿತು.

ಇಲ್ಲಿ ಯಾರಾದರೊಬ್ಬರು ಮರಣ ಹೊಂದಿದರೆ, ಅವರ ಅಂತ್ಯಕ್ರಿಯೆಯನ್ನು ಬಹಳ ವೈಭವದಿಂದ ಆಚರಿಸಲಾಗುತ್ತದೆ. ಅಂತ್ಯಕ್ರಿಯೆಯ ಕಾರ್ಯಕ್ರಮವು ಸುಮಾರು ನಾಲ್ಕು ದಿನಗಳವರೆಗೆ ನಡೆಯುತ್ತದೆ ಎನ್ನಲಾಗುತ್ತದೆ.

Leave a Reply