2018 ರ ಅತ್ಯಂತ ನಿರೀಕ್ಷಿತ ಪುಸ್ತಕಗಳಲ್ಲಿ ಒಂದಾದ ಸೌರವ್ ಗಂಗೂಲಿ ಅವರ ಆತ್ಮಚರಿತ್ರೆ ಪುಸ್ತಕ ಮಳಿಗೆಗಳನ್ನು ಪ್ರವೇಶಿಸಲು ಸಿದ್ಧವಾಗಿದೆ.

‘ಎ ಸೆಂಚುರಿ ಇಟ್ ನಾಟ್ ಇನಫ್’ ನ ಕೆಲವು ಭಾಗಗಳಲ್ಲಿ ದಾದಾ ತನ್ನ ವೃತ್ತಿ ಜೀವನದ ಕೆಟ್ಟಗಳಿಗೆಗಳು ಹೇಗೆ ಜೀವನವನ್ನು ರೂಪಿಸಿದವು ಎನ್ನುವ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

2004 ರಲ್ಲಿ ಜಾನ್ ರೈಟ್ ರಿಂದ ಖಾಲಿಯಾದ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಹುಡುಕುವ ಸಮಯದಲ್ಲಿ ನಾನು ದಾಲ್ಮಿಯಾ ಅವರಿಗೆ ಚಾಪೆಲ್ ಹೆಸರನ್ನು ಸೂಚಿಸಿದೆ. ಆದರೆ ಇದಕ್ಕೆ ಹಲವರು ವಿರೋಧಿಸಿದ್ದರು.

“ಸೌರವ್, ಈ ಬಗ್ಗೆ ಯೋಚಿಸಿ. ಚಾಪೆಲ್ ರೊಂದಿಗೆ ಸೇರಿ ತಂಡವನ್ನು ನಡೆಸುವಲ್ಲಿ ಸಮಸ್ಯೆಗಳು ಬರಬಹುದು . ಅವರ ಹಿಂದಿನ ತರಬೇತಿ ದಾಖಲೆ ಅಷ್ಟೊಂದು ಒಳ್ಳೆಯದಾಗಿಲ್ಲ” ಎಂದು ಸುನಿಲ್ ಗವಾಸ್ಕರ್ ನನಗೆ ಹೇಳಿದರು.

ದಾಲ್ಮಿಯಾ ಸ್ವತಃ ನನಗೆ ಹೀಗೆ ಕಿವಿಮಾತು ಹೇಳಿದ್ದರು, “ಚಾಪೆಲ್ ರವರ ಸಹೋದರ ಕೂಡ ಇದು ಸರಿಯಾದ ಆಯ್ಕೆ ಅಲ್ಲ ಎಂದು ಹೇಳಿದ್ದಾರೆ”

ಆದರೆ ನಾನು ಯಾವುದನ್ನು ಕಿವಿಗೆ ಹಾಕದೆ ಚಾಪೆಲ್ ಪರ ವಹಿಸಿದೆ ಮುಂದಿನದು ಇತಿಹಾಸ ಎಂದು ಸೌರವ್ ಬರೆದಿದ್ದಾರೆ.

ಜೀವನದಲ್ಲಿ ಎಲ್ಲವು ನಾವು ಅಂದುಕೊಂಡಂತೆ ಆಗುವುದಿಲ್ಲ. ಆಸ್ಟ್ರೇಲಿಯಾ ಪ್ರವಾಸದ ಯಶಸ್ಸು ಒಂದು ದಿಕ್ಕು, ಆದರೆ ಚಾಪೆಲ್ ಘಟನೆ ಇನ್ನೊಂದು ದಿಕ್ಕು.

2005 ವರ್ಷವು ನನ್ನ ಜೀವನದ ಅತ್ಯಂತ ಪ್ರಕ್ಷುಬ್ಧ ಅಧ್ಯಾಯವಾಗಿ ಉಳಿದಿದೆ. ತಂಡದ ನಾಯಕತ್ವದಿಂದ ಮಾತ್ರ ನನ್ನನ್ನು ಕೈ ಬಿಟ್ಟದ್ದಲ್ಲ, ಬದಲಾಗಿ ನನ್ನನು ತಂಡದಿಂದಲೇ ಹೊರಗೆ ಇಟ್ಟರು. ಇದು ನನ್ನ ಜೀವನದಲ್ಲಿ ಮರೆಯಲಾಗದ ಮತ್ತು ಒಪ್ಪಲಾಗದ ಘಟನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜಯ ಗಳಿಸುತ್ತಾ ಇದ್ದ ನಾಯಕನನ್ನು ತಂಡದಿಂದಲೇ ಕೈಬಿಟ್ಟದೂ ಇತಿಹಾಸದಲ್ಲಿ ಕಾಣಸಿಗದು. ನನ್ನ ಅಭಿಮಾನಿಗಳಿಗೆ ನಾನು ಮಹಾರಾಜನಾಗಿದ್ದೆ. ನನ್ನನ್ನು ತುಳಿತಕ್ಕೊಳಗಾದವನ ಹಾಗೆ ಮಾಡಿದರುಎಂದು ಸೌರವ್ ತನ್ನ ಆತ್ಮ ಚರಿತ್ರೆಯಲ್ಲಿ ಬರೆದು ಕೊಂಡಿದ್ದಾರೆ.

Leave a Reply