ಲಕ್ನೋ: ಉತ್ತರ ಪ್ರದೇಶದ ಬಾರಬಂಕೀ ಜಿಲ್ಲೆಯ ಬೆಲ್ವಾ ಹ್ಯಾಮ್ಲೆಟ್‍ನ ಕೋಥೀ ಪ್ರದೇಶದಲ್ಲಿರುವ ಅಲ್ ಹುಸೈನ್ ಮದ್ರಸವು ಇದೀಗ ಧಾರ್ಮಿಕ ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ.

ದೆಹಲಿಯ ಜಾಮಿಆ ಮಿಲ್ಲಿಯಾ ಇಸ್ಲಾಮಿಯಾದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದ ಕಾಝೀ ಫುರ್ಕಾನ್ ಅಖ್ತರ್‍ರವರು 2015ರಲ್ಲಿ ತಮ್ಮ ಊರಿನಲ್ಲಿ ಅಲ್ ಹುಸೈನ್ ಮದ್ರಸವನ್ನು ಸ್ಫಾಪಿಸಿದರು.

ಇದೇ ಮದ್ರಸದಲ್ಲಿ ರೀನಾ ವರ್ಮಾ ವಿದ್ಯಾರ್ಥಿಗಳಿಗೆ ಸಂಸ್ಕ್ರತ ಶಿಕ್ಪಣವನ್ನು ನೀಡುತ್ತಾರೆ. ಇದರೊಂದಿಗೆ ಆಧುನಿಕ ಶಿಕ್ಪಣಗಳಾದ ಇಂಗ್ಲಿಷ್ ಹಾಗೂ ಹಿಂದಿ ಸಾಹಿತ್ಯವನ್ನು ಮಕ್ಕಳಿಗೆ ಬೋಧಿಸಲಾಗುತ್ತದೆ.

ಆರಂಭದಲ್ಲಿ ಈ ಮದ್ರಸಕ್ಕೆ ಹಲವರು ಅಡ್ಡಿಪಡಿಸಿದರಾದರೂ ತದನಂತರ ಜನರು ಈ ಮದ್ರಸದತ್ತ ವಾಲತೊಡಗಿದರು. ಧಾರ್ಮಿಕ ಸೌಹಾರ್ದವನ್ನು ಮಕ್ಕಳಲ್ಲಿ ಬೆಳೆಸಲು ವಿವಿಧ ಧರ್ಮಗಳ ಆಚರಣೆಗಳನ್ನು ತಿಳಿಸುವುದರೊಂದಿಗೆ ಗೌರವ ಭಾವವನ್ನು ಮೂಡಿಸುವ ಕೆಲಸವನ್ನು ಈ ಮದ್ರಸ ಮಾಡುತ್ತಿದೆ.

ನ್ಯೂಸ್ 18 ಚ್ಯಾನೆಲ್‍ನೊಂದಿಗೆ ಮಾತನಾಡಿದ ಫುರ್ಕಾನ್ ಅಖ್ತರ್‍ರವರು “ಮದ್ರಸ ಎಂಬುದು ಅರೇಬಿಕ್ ಪದವಾಗಿದ್ದು ಇದರರ್ಥ ಶಾಲೆ ಎಂದಾಗಿದೆ. ಆದರೆ ಜನರು ಇಂದು ಮದ್ರಸಗಳ ಕುರಿತು ವಿವಿಧ ಮನೋವಿಕಾರಗಳನ್ನು ತೋರ್ಪಡಿಸುತ್ತಿದ್ದಾರೆ. ಇವುಗಳನ್ನೆಲ್ಲ ಮೆಟ್ಟಿನಿಂತು ಇಂದು ಅಲ್ ಹುಸೈನ್ ಮದ್ರಸವು ವಿವಿಧ ಧಾರ್ಮಿಕ ಶಿಕ್ಪಣಗಳ ನೆಲೆಯಾಗಿ ಗುರುತಿಸಿಕೊಳ್ಳುತ್ತಿರುವುದು ಸಂತೋಷದಾಯಕ” ಎಂದರು

Leave a Reply