ಎಲ್ಲಾದರೂ ಹೊರ ದೇಶಕ್ಕೆ ಸುತ್ತಾಡಲು ಹೋದರೆ ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ. ಚಳಿ ಅಥವಾ ಬಿಸಿ ವಾತಾವರಣ ಇದ್ದರೆ ರೆಸ್ಟೋರೆಂಟ್ ನಲ್ಲಿ ಕಂಬಳಿ ಹೊದ್ದು ಅಥವಾ ಎಸಿ ರೂಮಿನಲ್ಲಿ ಮಲಗಿ ಆನಂದಿಸುತ್ತೇವೆ‌.

ಆದರೆ ಮಲೇಷಿಯಾದಿಂದ ಭಾರತಕ್ಕೆ ಸುತ್ತಾಡಲು ಬಂದ ಇಬ್ಬರು ಯುವಕರು ಸುತ್ತಾಡಲು ಜೈಲಿಗೆ ಹೋಗಿದ್ದಾರೆ. ಇದು ತಮಾಷೆಯಲ್ಲ.

ದಂತ ವೈದ್ಯರು ಮತ್ತು ರೆಸ್ಟೋರೆಂಟ್ ಮಾಲಿಕ ರಾಗಿರುವ ಇಬ್ಬರು ಮಲೇಷಿಯನ್ ಯುವಕರು ತೆಲಂಗಾಣದಲ್ಲಿನ ಹೆರಿಟೇಜ್ ಜೈಲ್ ಮ್ಯೂಸಿಯಂನಲ್ಲಿ ಎರಡು ದಿನಗಳನ್ನು ಕಳೆದರು.

ತೆಲಂಗಾಣ ಜೈಲು ಇಲಾಖೆಯು “ಫೀಲ್ ದಿ ಜೈಲ್” ಎಂಬ ವಿಶಿಷ್ಟವಾದ ಜೈಲು ಪ್ರವಾಸೋದ್ಯಮ ಕಾರ್ಯಕ್ರಮವನ್ನು ನಡೆಸುತ್ತದೆ. ಅಲ್ಲಿ ಸಂಗ್ರೆಡ್ಡಿ ಜೈಲಿನಲ್ಲಿ ಯಾರಾದರೂ 24 ಗಂಟೆಗಳ ಕಾಲ ಕಳೆಯಬಹುದು.

ಪಿಡಬ್ಲ್ಯೂಡಿ ರೆಕಾರ್ಡ್ಸ್ ಪ್ರಕಾರ, ಈ ಜೈಲು 220 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದೆ. 1796 ಎಡಿ ವರ್ಷದಲ್ಲಿ ಇದನ್ನು ನಿರ್ಮಿಸಲಾಯಿತು.

Leave a Reply