ಕೇರಳದ ಕರುನಾಗಪಳ್ಳಿಯ ಶಾಲೆಯೊಂದರಲ್ಲಿ ಎರಡನೇಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೋರ್ವಳಿಗೆ ಆಕೆಯ ಮಲತಾಯಿ ಸೌಟು ಬಿಸಿ ಮಾಡಿ ಮೈಗೆ ತಾಗಿಸಿ ಸುಟ್ಟ ಗಾಯಗಳಾಗಿ ಬೊಬ್ಬೆ ಏಳುವಂತೆ ಮಾಡಿದ್ದಳು.

ಈ ವಿಚಾರವನ್ನು ಅರಿತ ತರಗತಿಯ ಶಿಕ್ಷಕಿ ರಾಜಿ ಎಂಬವರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಿಗೆ ಹಂಚಿದ್ದರು. ಇದು ವೈರಲ್ ಆಗುವುದರೊಂದಿಗೆ ಹುಡುಗಿಯ ತಂದೆ ಹಾಗೂ ಮಲತಾಯಿಯನ್ನು ಬಂಧಿಸಲಾಗಿದೆ.

ಆದರೆ ಈ ಹುಡುಗಿಯನ್ನು ದೌರ್ಜನ್ಯದಿಂದ ಪಾರು ಮಾಡಿದ ಶಿಕ್ಷಕಿಯನ್ನು ಆಡಳಿತ ಮಂಡಳಿ ಕೆಲಸದಿಂದಲೇ ತೆಗೆದು ಹಾಕಿದೆ. ನಮ್ಮ ಶಾಲೆಯ ಮರ್ಯಾದೆಯನ್ನು ಹಾಳು ಮಾಡಿದಳು ಎಂದು ಆರೋಪಿಸಿದ ಆಡಳಿತ ಮಂಡಳಿ ಈ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಂಡಿತ್ತು.

ಆ ಬಾಲಕಿಯನ್ನು ಹಿಂಸೆಯಿಂದ ಪಾರು ಮಾಡಿದ ಶಿಕ್ಷಕಿಯನ್ನೇ ಶಾಲೆಯಿಂದ ಹೊರ ದಬ್ಬಿದ ಆಡಳಿ ಮಂಡಳಿಯ ಕಾರ್ಯ ವೈಖರಿ ಹೇಗಿದೆ. ಸ್ವಲ್ಪ ಯೋಚಿಸಿ. ಇಂತಹ ಆಡಳಿತ ಸಂಸ್ಥೆಗಳಿಂದ ಸಮಾಜದಲ್ಲಿ ಎಂತಹ ಬದಲಾವಣೆ ಕಾಣಬಹುದು. ಊರ ನಾಗರಿಕರೂ ಮುಖ್ಯಮಂತ್ರಿಗಳು ಕೂಡಾ ಈ ಶಿಕ್ಷಕಿಯ ಪರ ಧ್ವನಿಯೆತ್ತಿ ಕೂಡಾ ಅವರನ್ನು ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವ ಬಗ್ಗೆ ಆಡಳಿತ ಮಂಡಳಿ ನಿಗೂಢ ಮೌನ ವಹಿಸುತ್ತಿದೆ. ಆ ಬಾಲಕಿಯ ಖಾಸಗಿ ವಿಷಯಗಳಲ್ಲಿ ಭಾಗಿಯಾಗಿದ್ದೇ ಅವರಿಗೆ ಮುಳುವಾದಂತಹ ಪರಿಸ್ಥಿತಿ ಉದ್ಭವವಾಗಿದೆ.

ಈ ಕುರಿತು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕಿಯವರು ಪ್ರತಿಕ್ರಿಯಿಸುತ್ತಾ, ” ನಾನು ಕಳೆದ ವರ್ಷದಿಂದ ಆ ಹುಡುಗಿಯನ್ನು ಗಮನಿಸುತ್ತಿದ್ದೆ. ಒಂದು ದಿನ ಶಿಕ್ಷಕರೊಬ್ಬರು ಈ ಬಾಲಕಿಯನ್ನು ಕರೆ ತಂದು ಈಕೆಯ ತಲೆ ಹೇನಿನಿಂದ ತುಂಬಿಕೊಂಡಿದೆ, ಏನು ಮಾಡುವುದು ಅಂತ ತೋಚುವುದಿಲ್ಲ ಎಂದಿದ್ದರು. ಬಳಿಕ ನಾನು ಈ ಬಗ್ಗೆ ಪರಾಮರ್ಶಿಸಿದಾಗ ಈಕೆಗೆ ತಾಯಿ ಇಲ್ಲ. ಮಲತಾಯಿಯೊಂದಿಗೆ ಜೀವಿಸುತ್ತಿದ್ದಾಳೆಂದು ಅರಿವಿಗೆ ಬಂತು.
ಆ ಬಳಿಕ ಆಕೆ ನನಗೆ ಮಗಳಂತಿದ್ದಳು. ಮದ್ಯಾಹ್ನದ ಊಟವಾದ ಕೂಡಲೇ ಸ್ಟಾಫ್ ರೂಮಿಗೆ ಆಕೆ ಬರುತ್ತಿದ್ದಳು. ಅವಳಿಗಾಗಿ ನಾನು ಏನಾದರೊಂದು ತೆಗೆದಿರಿಸುತ್ತಿದ್ದೆ. ಅವಳೇ ನನ್ನ ಬ್ಯಾಗನ್ನು ಓಪನ್ ಮಾಡಿ ತೆಗೆದುಕೊಳ್ಳುತ್ತಿದ್ದಳು. ಸಂಜೆ ಏನಾದರೂ ಕೇಳಿ ಪಡೆದುಕೊಳ್ಳುತ್ತಿದ್ದಳು. ನನ್ನೊಂದಿಗೆ ಕೋಪಿಸುತ್ತಿದ್ದಳು, ಅಷ್ಟೇ ವೇಗವಾಗಿ ಅವಳು ಸ್ನೇಹದಿಂದ ಒಂದಾಗುತ್ತಿದ್ದಳು. ಬಳಿಕ ನಾವು ತಾಯಿ ಮಕ್ಕಳಂತೆ ಇದ್ದೆವು. ಇದು ಕೆಲವು ಶಿಕ್ಷಕರಿಗೆ ಮಾತ್ರ ಹಿಡಿಸಿತ್ತು. ಅವರಲ್ಲಿ ಶೋಭನಾ ಟೀಚರ್, ದ್ರೌಪದಿ ಟೀಚರ್, ಹಕೀಮ್ ಸರ್ ರಜೀನ ಟೀಚರ್, ಬಿನೋಯ್ ಸರ್ ಮತ್ತು ಇಲ್ಲಿನ ಆಯಾಗಳು ಇವಳೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರು. ಇವರಲ್ಲಿ ಈರ್ವರು ಈಗ ವರ್ಗಾವಣೆಯಾಗಿ ನಿವೃತ್ತಿ ಪಡೆದು ಹೋಗಿದ್ದಾರೆ

ಅವಳು ಸ್ಟಾಫ್ ರೂಮಿಗೆ ಬರುವುದನ್ನು ಕೆಲವರು ವಿರೋಧಿಸುತ್ತಿದ್ದರು. ರಾಜಿ ಅಮ್ಮ ಎಂದು ಮನೆಯಲ್ಲಿ ಪ್ರಸ್ತಾಪಿಸಿದ್ದನ್ನು ನೋಡಿ ಒಮ್ಮೆ ಆಕೆಯ ತಂದೆ ಹಾಗೂ ಮಲತಾಯಿ ಶಾಲೆಗೆ ಬಂದಿದ್ದರು. ನಾನು ಅವಳನ್ನು ಮಾತ್ರವಲ್ಲ ಎಲ್ಲ ಮಕ್ಕಳನ್ನೂ ಮಕ್ಕಳಂತೆ ಕಾಣುತ್ತೇನೆ. ಈ ವಿಚಾರದಲ್ಲಿ ಭಾಗಿಯಾದದ್ದಕ್ಕಾಗಿ ನನ್ನನ್ನು ಕೆಲಸದಿಂದ ತೆಗೆಯಲಾಗಿದೆ. ಇದು ಕೇವಲ ಮುಖ್ಯೋಪಾಧ್ಯಾಯಿನಿ ಹಾಗೂ ಕೆಲ ಶಿಕ್ಷಕಿಯವರ ಏಕ ಪಕ್ಷೀಯವಾದ ತೀರ್ಮಾನವಾಗಿದೆ.

ವಾಸ್ತವ ಅರಿತುಕೊಂಡ ಊರಿನ ನಾಗರಿಕರು ಮತ್ತು ಪಂಚಾಯತ್ ಸದಸ್ಯರು ನನ್ನ ಪರವಾಗಿ ನಿಂತರು. ಈ ಬಾಲಕಿಯ ಜೀವನ ಬೆಳಗಲು ಕಾರಣವಾಗಿ ನನ್ನ ಹುದ್ದೆ ತೊರೆಯಬೇಕಾಗಿ ಬಂದರೆ ಅದಕ್ಕೆ ದೇವನು ಸಾಕ್ಷಿ. ಎಂದು ಹೇಳಿದ್ದಾರೆ.

ಶಾಲಾ ಆಡಳಿತ ಮಂಡಳಿಯು ನಿಜವಾಗಿ ಯಾರನ್ನು ಹೊರದಬ್ಬ ಬೇಕಾಗಿತ್ತೋ ಅವರು ಅಧಿಕಾರ ನಡೆಡಸುತ್ತಿದ್ದಾರೆಂಬುದು ಸತ್ಯ. ಆದ್ದರಿಂದ ತಾನು ಕಲಿಸುವ ಮಗುವಿಗೆ ತಾಯಾಗಿ ನಿಂತು ಮಾದರಿಯಾದ ರಾಜಿ ಟೀಚರ್ ನಿಜಕ್ಕೂ ಅಭಿನಂದನಾರ್ಹರು. ಆದರೆ ಆಡಳಿತ ಮಂಡಳಿ ಈ ಶಿಕ್ಷಕಿಯನ್ನು ಹೊರದಬ್ಬಿ ತನ್ನ ಅರ್ಹತೆಯೇನೆಂಬುದನ್ನು ಬಹಿರಂಗ ಪಡಿಸಿದೆ.

ಲೇಖಕರು: ಸಲೀಮ್ ಬೋಳಂಗಡಿ

Leave a Reply