ಸಾಂದರ್ಭಿಕ ಚಿತ್ರ

2007 ನೇ ಸಾಲಿನಲ್ಲಿ ತನಗೆ ಸಿಗಬೇಕಾಗಿದ್ದ ಸ್ನಾತಕೋತ್ತರ ಪದವಿಯನ್ನು ತಡೆ ಹಿಡಿದಿರುವುದನ್ನು ಪ್ರಶ್ನಿಸಿ ಹಲವು ಬಾರಿ ಉಪಕುಲಪತಿಗಳಿಗೆ ಪತ್ರ ಆತನಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ಲಭಿಸಿರಲಿಲ್ಲ.

ತದನಂತರ ವಿಳಂಬದ ಕಾರಣವನ್ನರಿಯಲು ಉಪಕುಲಪತಿಗಳನ್ನು ಮುಖತಃ ಭೇಟಿಯಾಗಲು ತೆರಳಿದ ಚಂದ್ರ ಮೋಹನ್ ರವರಿಗೆ ಭೇಟಿಯಾಗಲು ಅನುಮತಿ ಲಭಿಸದೇ ಇದ್ದಾಗ ಉಪಕುಲಪತಿಗಳ ಕಛೇರಿಯ ಪರ್ಸನಲ್ ಅಸಿಸ್ಟೆಂಟ್ ಆದ ಜೈಕುಮಾರ್ ನಾಯರ್ ರೊಂದಿಗೆ ವಾಗ್ವಾದ ನಡೆಸಿ ತದನಂತರ ರೊಚ್ಚಿಗೆದ್ದ ಚಂದ್ರ ಮೋಹನ್ ಅಲ್ಲಿನ ಸೋಫಾದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತೆಲಂಗಾಣ ದಲ್ಲಿ ನಡೆದಿದೆ. ಪರಿಣಾಮವಾಗಿ ಎರಡು ಕೋಣೆಗಳು ಸಂಪೂರ್ಣ ಅಗ್ನಿಗಾಹುತಿಯಾಗಿವೆ.

ಅದೃಷ್ಟವಶಾತ್ ಅಂದು ಉಪಕುಲಪತಿಗಳಾದ ಪರಿಮಳ್ ವ್ಯಾಸ್ ಕಛೇರಿಯಲ್ಲಿಲ್ಲದುದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದೆ.

2007 ರಲ್ಲಿ ಲಲಿತಕಲೆಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರಾದರೇ ಹಿಂದೂ ದೇವತೆಗಳನ್ನು ಹಾಗೂ ದೇವರುಗಳ ಚಿತ್ರಗಳನ್ನು ಅಶ್ಲೀಲ ವಾಗಿ ಚಿತ್ರಿಸಿದುದರಿಂದ ವಿಶ್ವ ಹಿಂದೂ ಪರಿಷತ್ತಿನ ಕೆಂಗಣ್ಣಿಗೆ ಗುರಿಯಾಗಿದ್ದರು.

ಚಂದ್ರ ಮೋಹನ್ ತಾನು ಬೆಂಕಿ ಹಚ್ಚಿದುದ್ದನ್ನು ಒಪ್ಪಿಕೊಂಡಿದ್ದು ಹನ್ನೊಂದು ವರ್ಷಗಳಿಂದ ವಿಶ್ವವಿದ್ಯಾಲಯವು ತನ್ನ ಪದವಿಯನ್ನು ತಡೆ ಹಿಡಿದುದರಿಂದ ನಿರಾಶೆಗೊಂಡು ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

Leave a Reply