ಹೈದರಾಬಾದ್ : ಅಮ್ಮಾ ನನ್ನನ್ನು ಕ್ಷಮಿಸು. ಪರೀಕ್ಷೆ ಶುಲ್ಕವನ್ನು ಪಾವತಿಸದಿದ್ದದ್ದಕ್ಕಾಗಿ ನನ್ನನ್ನು ಅವರು ಪರೀಕ್ಷೆಗೆ ಕೂರಿಸಿಲ್ಲ ಎಂದು ಮನನೊಂದು ಪತ್ರ ಬರೆದಿಟ್ಟು, ಖಾಸಗಿ ಶಾಲೆಯ 9ನೇ ತರಗತಿ ಓದುತ್ತಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪರೀಕ್ಷಾ ಶುಲ್ಕವನ್ನು ಪಾವತಿಸಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಸಾರ್ವಜನಿಕವಾಗಿ ಅವಮಾನಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ನೊಂದ ಬಾಲಕಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ದೂರಿದ್ದಾರೆ. ಪೊಲೀಸರು ತನಿಖೆ ಮುಂದು ವರೆಸಿದ್ದಾರೆ.

ಕೇವಲ ಎರಡು ಸಾವಿರ ಶುಲ್ಕ ಪಾವತಿಸದ್ದರಿಂದ ಆಕೆಯನ್ನು ಅವಮಾನಿಸಿದ್ದರಿಂದ ಆಕೆ ಹೀಗೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಜನರು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

Leave a Reply