ಲಾಸ್ ಆಂಜಲಿಸ್, ಫೆ.20: ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಗಮನಕ್ಕೆ ಬೀಳಲು ಹದಿಹರೆಯದ ಜನಾಂಗ ಕಠಿಣ ಪರಿಶ್ರಮ ನಡೆಸುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹನ್ನೆರಡರಿಂದ ಹಿಡಿದು ಹದಿನೆಂಟು ವರ್ಷದವರೆಗಿನ ಯುವಕರಲ್ಲಿ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ.

ಹೊಸ ಚಿತ್ರಗಳನ್ನು ಪೋಸ್ಟ್ ಮಾಡುವುದು, ಸ್ಟೇಟಸ್‍ಗಳನ್ನು ಅಪ್‍ಡೇಟ್ ಮಾಡುವುದು ಮೊದಲಾದ ಕೆಲಸವನ್ನು ಹೆಚ್ಚಾಗಿ ಹದಿಹರೆಯದವರು ಮಾಡುತ್ತಿದ್ದಾರೆ.

ಆದರೆ ಸಾಮಾಜಿಕ ಮಾಧ್ಯಮಗಳ ಬಳಕೆಯ ವೇಳೆ ಹೆಚ್ಚು ಲಕ್ಷ್ಯ ವಹಿಸುವುದಿಲ್ಲ ಎಂದು ಕ್ಯಾಲಿಫೋರ್ನಿಯದ ಯುನಿವರ್ಸಿಟಿ ಸಂಶೋಧಕರಲ್ಲಿ ಒಬ್ಬರಾದ ಜೊವಾನ ಯಾವು ಹೇಳಿದ್ದಾರೆ.

Image result for youth in social media
ಸಾಂದರ್ಭಿಕ ಚಿತ್ರ

ಇವರ ಚಟುವಟಿಕೆಗಳನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ಗೆಳೆಯರ ನಡುವೆ ಗಮನ ಸೆಳೆಯುವ ಇಷ್ಟ ಇವರದ್ದಾಗಿದೆ ಜೋವಾನ ಹೇಳಿದ್ದಾರೆ. ಫೇಸ್ ಬುಕ್, ವಾಟ್ಸಪ್, ಇನ್ಸಟ್‍ಗ್ರಾಂ ಮೊದಲಾದುವುಗಳನ್ನು ಯಾವ ರೀತಿಯಲ್ಲಿಯೂ ಉಪಯೋಗಿಸುವುದು ಇವರಿಗೆ ಗೊತ್ತಿದೆ.

ತಮ್ಮ ವ್ಯಕ್ತಿತ್ವ ಹೇಗೆ ಇನ್ನೊಬ್ಬರಿಗೆ ದಾಟಿಸುವುದು ಎನ್ನುವ ಬಗ್ಗೆ ಇವರಲ್ಲಿ ಸ್ಪಷ್ಟ ಅಭಿಪ್ರಾಯ ಇದೆ. ಆದರೆ ಚಿತ್ರ ಪೋಸ್ಟ್ ಮಾಡುವಲ್ಲಿ ಹುಡುಗಿಯರು ಹೆಚ್ಚು ಜಾಗೃತೆಯನ್ನು ಪಾಲಿಸುತ್ತಾರೆ.

ಸರಿಯಾದ ಸಲಹೆ ಪ್ರಕಾರ ಹೆಣ್ಣು ಮಕ್ಕಳು ಸಾಮಾಜಿಕ ಜಾಲ ತಾಣವನ್ನು ಉಪಯೋಗಿಸುತ್ತಿದ್ದಾರೆ. ತಮ್ಮನ್ನು ಗಮನಿಸುವವರನ್ನು ಮಾತ್ರ ಇವರು ಗೆಳೆಯರನ್ನಾಗಿಸಲು ಮತ್ತು ಅವರಲ್ಲಿ ಕೆಲವು ಪೋಸ್ಟ್‍ಗಳ
ಅಭಿಪ್ರಾಯವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

Image result for youth in social media
ಸಾಂದರ್ಭಿಕ ಚಿತ್ರ

ಆದರೆ, ಗಂಡು ಮಕ್ಕಳು ಈ ವಿಷಯದಲ್ಲಿ ಸರಿಯಾದ ಮಾನದಂಡವನುಮಾನದಂಡವನ್ನು ಹೊಂದಿಲ್ಲ ಎಂದು ಅಧ್ಯಯನ ವರದಿ ವಿವರಿಸಿದೆ.

Leave a Reply