ವಿಶ್ವದಲ್ಲೇ ಅತಿ ಎತ್ತರದ ಟ್ರಾಫಿಕ್ ಪೋಲೀಸ್ ಎಂಬ ಖ್ಯಾತಿಗೆ ಪಂಜಾಬ್ ಟ್ರಾಫಿಕ್ ಪೋಲಿಸ್ ಜಗ್ ದೀಪ್ ಪಾತ್ರರಾಗಿದ್ದಾರೆ. ಪ್ರಸ್ತುತ ಅವರು ಅಮೃತಸರ ಟ್ರಾಫಿಕ್ ಪೋಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಗದೀಪ್ ಸಿಂಗ್ 7 ಅಡಿ ಮತ್ತು 6 ಇಂಚುಗಳಷ್ಟು ಎತ್ತರವಿದ್ದಾರೆ. ಪಂಜಾಬ್‌ನ ಮಾಜಿ ಪೋಲೀಸ್ ಮತ್ತು WWE ಪಟು ಗ್ರೇಟ್ ಖಲಿಗಿಂತಲೂ ಇವರು ಎತ್ತರ ಇದ್ದಾರೆ. ಸಿಂಗ್ ರವರ ಯುನಿಫಾರಂ ವಿಶೇಷವಾಗಿ ತಯಾರಿಸಲಾಗುತ್ತದೆ. ಅವರ ಶೂ ಗಾತ್ರವು 19 ಇಂಚು, ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಜಗ್ದೀಪ್ ಸ್ಥಳೀಯವಾಗಿ ಎಲ್ಲರಿಗೂ ಬಹಳ ಆಕರ್ಷಕ ವ್ಯಕ್ತಿತ್ವ ಆಗಿದ್ದಾರೆ. ಕೆಲವರು ಅವರ ಬಳಿ ಬಂದು ಸೆಲ್ಫಿ ತೆಗೆಯುತ್ತಾರೆ.
ಜಗ್ದೀಪ್ ರವರ ಎತ್ತರ ಬಹಿರಂಗ ಆಗುವುದಕ್ಕೆ ಮುಂಚೆ ಹರಿಯಾಣದ ರಾಜೇಶ್ ಕುಮಾರ್ ಅತಿ ಎತ್ತರದ ಟ್ರಾಫಿಕ್ ಪೊಲೀಸ್ ಆಗಿದ್ದರು. ಕುಮಾರ್ 7 ಅಡಿ ಮತ್ತು 4 ಅಂಗುಲ ಎತ್ತರವಿದ್ದಾರೆ.

ಭಾರತದಲ್ಲಿ ಅತಿ ಎತ್ತರದ ಪೊಲೀಸ್ ಅಧಿಕಾರಿ ಎಂಬ ಹೆಮ್ಮೆ ನನಗೆ ಇದೆ. ನಾನು 7ft 6 ಇಂಚು ಎತ್ತರವಿದ್ದು ಸುಮಾರು 190 ಕಿಲೋಗ್ರಾಂಗಳಷ್ಟು ತೂಕ ಇದ್ದೇನೆ. ಈ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ನನಗೆ ಬಸ್ ಮತ್ತು ಕ್ಯಾಬ್ ನಲ್ಲಿ ಸಂಚರಿಸಲು ಕಷ್ಟವಾಗುತ್ತದೆ ಎಂದವರು ಹೇಳುತ್ತಾರೆ.

ಮದುವೆಯ ವೇಳೆ ಅವರ ಎತ್ತರಕ್ಕೆ ಸೂಕ್ತವಾದ ಹುಡುಗಿ ಸಿಗಲು ಬಹಳ ಕಷ್ಟವಾಗಿತ್ತು.ಅತಿಯಾದ ಎತ್ತರದ ಕಾರಣದಿಂದ ಇವರನ್ನು ನಿರಾಕರಿಸಿದವರಿದ್ದಾರೆ. ಕೊನೆಗೆ 5 ಅಡಿ 11 ಇಂಚುಗಳಷ್ಟು ಉದ್ದ ಇರುವ ಸುಖ್ಬಿರ್ ಕೌರ್ ರನ್ನು ಜಗ್ದೀಪ್ ವಿವಾಹವಾದರು. ಪಂಜಾಬ್ ರಾಜ್ಯದ ಅತಿ ಎತ್ತರದ ವ್ಯಕ್ತಿಯನ್ನು ಮದುವೆಯಾದುದಕ್ಕೆ ನನಗೆ ಹೆಮ್ಮೆಯಿದೆ ಎಂದು ಕೌರ್ ಹೇಳಿದ್ದಾರೆ.

ಕೆಲವರು ನನ್ನ ದೈತ್ಯಾಕಾರವನ್ನು ನೋಡಿ ಗೇಲಿ ಮಾಡುತ್ತಾರೆ, ನಗುತ್ತಾರೆ. ಆದರೆ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ನನ್ನ ಕರ್ತವ್ಯದ ಕಡೆ ಗಮನ ಹರಿಸುತ್ತೇನೆ ಎಂದು ಜಗ್ದೀಪ್ ಹೇಳುತ್ತಾರೆ.

Photo courtesy Dailymail

Leave a Reply