ತಮಿಳ್ನಾಡು: ಪತಿ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ಯೂಟ್ಯೂಬ್ ನಲ್ಲಿನ ಟ್ಯುಟೋರಿಯಲ್ ವೀಡಿಯೊಗಳ ಸಹಾಯದಿಂದ ಮನೆಯಲ್ಲೇ ಪತ್ನಿಗೆ ಹೆರಿಗೆ ಮಾಡಿಸಿದ ಪರಿಣಾಮವಾಗಿ 28 ವರ್ಷದ ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡಿ ಮೃತಪಟ್ಟದ್ದಾಗಿ ಆರೋಪಿಸಲಾಗಿದೆ.

ಈ ಘಟನೆ ತಮಿಳುನಾಡಿನ ತಿರುಪ್ಪುರ್ ಎಂಬಲ್ಲಿ ನಡೆದಿದ್ದು, ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಜುಲೈ 22 ರಂದು ಕೃತಿಗ ಎಂಬ ಮಹಿಳೆ ಹೆರಿಯ ನಂತರ ಮನೆಯಲ್ಲಿ ಮೃತಪಟ್ಟರು. ಅವಳ ಪತಿ ಹೆರಿಗೆ ಮಾಡಿಸಲು ಸಹಾಯಕ್ಕಾಗಿ ಸ್ನೇಹಿತ ಪ್ರವೀಣ್ ಮತ್ತು ಅವರ ಪತ್ನಿ ಲಾವಣ್ಯರನ್ನೂ ಕರೆದಿದ್ದರು.

ಮಹಿಳೆಯು ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಂತರ ಅತಿಯಾದ ರಕ್ತಸ್ರಾವವುಂಟಾಗಿದೆ. ದಂಪತಿಗಳಿಗೆ ಮೂರು ವರ್ಷದ ಮಗುವಿದ್ದು, ಎರಡನೇ ಹೆರಿಗೆ ನಾರ್ಮಲ್ ನಾಚುರಲ್ ಹೆರಿಗೆಯಾಗಬೇಕೆಂದು ಅವರು ಬಯಸಿದ್ದರು ಎನ್ನಲಾಗಿದೆ.

ಗರ್ಭಿಣಿ ಮಹಿಳೆಯ ಸಾವಿಗೆ ಕಾರಣವಾದ ಮೂವರನ್ನೂ ಪೊಲೀಸರು ಬಂಧಿಸಿದ್ದು, ಮನೆಯಲ್ಲಿ ಇಂತಹ ಹವ್ಯಾಸಿ ಪ್ರಯೋಗಗಳನ್ನು ಕೈಗೊಳ್ಳಬಾರದು ಎಂದು ರಾಜ್ಯ ಆರೋಗ್ಯ ಸಚಿವ ಡಾ. ಸಿ. ವಿಜಯ ಭಾಸ್ಕರ್ ಜನರನ್ನು ಎಚ್ಚರಿಸಿದ್ದಾರೆ.

Leave a Reply