ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ಸುದೀಕ್ಷಾ ಭಾಟಿಯ ಜೀವನದಲ್ಲಿ ಅಕ್ಷರಶಃ ನಿಜವಾಗಿದೆ. ಸಾಮಾನ್ಯ ಟೀ ಮಾರುವ ತಂದೆಯ ಮಗಳು ಇದೀಗ ಅಮೆರಿಕದ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಯಲು ಬರೋಬ್ಬರಿ 3.8 ಕೋಟಿ ವಿದ್ಯಾರ್ಥಿವೇತನ ಮಂಜೂರಾಗಿದೆ.

ಚಹಾ ಮಾರಾಟಗಾರನ ಮಗಳಾದ ಸುದೀಕ್ಷಾರ ಕುಟುಂಬದಲ್ಲಿ ಯಾರೂ ಕಲಿತವರಿಲ್ಲ.  ತಂದೆಗೆ ಕೇವಲ ಕೇವಲ 72,000 ರೂ. ವಾರ್ಷಿಕ ಆದಾಯ. ಅದರಲ್ಲೇ ಕುಟುಂಬ ಖರ್ಚುಗಳನ್ನು  ವೆಚ್ಚಗಳನ್ನು ನೋಡಿಕೊಳ್ಳಬೇಕು. ಆದರೆ ಕುಟುಂಬದ ಈ ಪರಿಸ್ಥಿತಿಯನ್ನು ಬದಲಾಯಿಸಬೇಕೆಂಬ ಛಲ ಸುದೀಕ್ಷಾರಲ್ಲಿತ್ತು.  ಸಿಬಿಎಸ್ಇ ಮಂಡಳಿ ಪರೀಕ್ಷೆಗಳಲ್ಲಿ 98% ಅಂಕ ಗಳಿಸಿ ಜಿಲ್ಲೆಗೆ ಅಗ್ರಸ್ಥಾನ ಪಡೆದಳು. ಇದೀಗ ಆಕೆ ಮುಂದಿನ ಅಧ್ಯಯನಕ್ಕಾಗಿ ಅಮೇರಿಕಾಕ್ಕೆ ಹೋಗಿದ್ದಾರೆ.

ಸೆಮಿಸ್ಟರ್ ಗೆ 70,428 ಯುಎಸ್ ಡಾಲರ್ ನಂತೆ ಆಕೆಯ ಕಲಿಕೆಗೆ ಸಂಪೂರ್ಣ ಸ್ಕಾಲರ್ಶಿಪ್ ನೀಡಲಾಗಿದೆ. ಅಮೇರಿಕಾದ ಟಾಪ್ ಕಾಲೇಜು ಬಾಬ್ಸನ್ ನಿಂದ ಈ ಸ್ಕಾಲರ್ಶಿಪ್ ಸಿಕ್ಕಿದೆ.

“ಆರಂಭದಲ್ಲಿ ಕಲಿಯಲು ಹಣದ ಕೊರತೆ ದೊಡ್ಡ ಸಮಸ್ಯೆಯಾಗಿತ್ತು. 2011 ರಲ್ಲಿ ಗ್ರಾಮೀಣ ಪ್ರಶಂಸನೀಯ ಮಕ್ಕಳಲ್ಲಿ ವಾಸಯೋಗ್ಯ ಲೀಡರ್ಶಿಪ್ ಅಕಾಡೆಮಿ, ವಸತಿ ಶಾಲೆಗಯಲ್ಲಿ ಅಧ್ಯಯನ ಮಾಡಲು ನನಗೆ ಅವಕಾಶ ಸಿಕ್ಕಿತು. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಮಾತ್ರವಲ್ಲ, ಕುಟುಂಬ ಮತ್ತು ಸಮುದಾಯದ ಪೂರ್ವಾಗ್ರಹವನ್ನು ಗೆಲ್ಲುವುದೂ ಮತ್ತೊಂದು ಗಂಭೀರ ಸವಾಲಾಗಿತ್ತು. ಆ ಎಲ್ಲಾ ಸವಾಲುಗಳನ್ನು ನಿರಾಳವಾಗಿ ಎದುರಿಸಿದ್ದೇನೆ. ಏನನ್ನಾದರೂ ಮಾಡಲು ನಿರ್ಧರಿಸಿದರೆ ಅದನ್ನು ಮಾಡಿಯೇ ತೀರುತ್ತೇನೆ. ಆಗ ದೇವರ ಸಹಾಯ ಇರುತ್ತದೆ. ನನ್ನ ಶಿಕ್ಷಕರು ಮತ್ತು ಶಾಲೆಯ ಸಂಪೂರ್ಣ ಬೆಂಬಲ ನನಗಿತ್ತು. ಅವರ ಕುಟುಂಬವನ್ನು ವಿಶ್ವಾಸಕ್ಕೆ ತೆಗೆದು ಕೊಂಡರು” ಎಂದು ಸುದೀಕ್ಷಾ ಟೈಮ್ಸ್ ನೌ ಸಂದರ್ಶನದಲ್ಲಿ ಹೇಳಿದ್ದಾರೆ.

Photo courtesy : Times now

Leave a Reply