ಲಂಡನ್‌: ಬರ್ಮಿಂಗ್ಹ್ಯಾಮ್‌‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಾಟದಲ್ಲಿ ನಾಯಕ ವಿರಾಟ್ ಕೊಹ್ಲಿ 149 ರನ್ ಶತಕದೊಂದಿಗೆ ‌ಭಾರತ ಎರಡನೇ ದಿನ 13 ರನ್‌ಗಳ ಅಲ್ಪ ಮೊತ್ತದ ಹಿನ್ನಡೆ ಸಾಧಿಸಿದೆ.

ಇಂದು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 55 ರನ್‌ಗಳವರೆಗ ವಿಕೆಟ್ ನಷ್ಟವಿಲ್ಲದೆ ಉತ್ತಮವಾಗಿ ಆಡುತ್ತಿತ್ತು. ಈ ವೇಳೆ ದಾಳಿಗಿಳಿದ ವೇಗದ ಬೌಲರ್ ಸಮ್ ಕರನ್ ಆರಂಭಿಕ ದಾಂಡಿಗ ಮುರುಳಿ ವಿಜಯ್, ಶಿಖರ್ ಧವನ್ ಹಾಗೂ ವನ್ ಡೌನ್ ಎಲ್ ರಾಹುಲ್ ವಿಕೆಟ್‌ಗಳನ್ನು ಕಬಳಿಸಿದರು. ಎರಡು ಓವರ್‌ಗಳ ಅವಧಿಯಲ್ಲಿ ಈ ಮೂವರು ಪ್ರಮುಖ ಆಟಗಾರರನ್ನು ಕರನ್ ಪೆವಿಲಿಯನ್ ಹಾದಿ ಹಿಡಿಸಿದರು.

ರಾಹುಲ್ ವಿಕೆಟ್ ಬಿದ್ದ ನಂತರ ಬ್ಯಾಟ್ ಮಾಡಲು ಬಂದ ನಾಯಕ ಕೊಹ್ಲಿ ಏಕಾಂಗಿಯಾಗಿ ಶತಕವನ್ನು ಪೂರೈಸಿದರು.‌ ಕೊಹ್ಲಿಗೆ ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್ ಸಾಥ್ ನೀಡಿದರು. ಕೊನೆಯ ವಿಕೆಟ್‌ಗೆ ಕೊಹ್ಲಿ ಮತ್ತು ಉಮೇಶ್ ಯಾದವ್ ಅರ್ಧಶತಕದ ಜೊತೆಯಾಟ ನಡೆಸಿದರು. ಇದರೊಂದಿಗೆ ಭಾರತ ಪ್ರಥಮ ಇನ್ನಿಂಗ್ಸ್ ಅಂತ್ಯಕ್ಕೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 274 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್ ವಿವರ

ಜೊಯ್ ರೂಟ್ 80, ಬೇರ್‌ಸ್ಟೌ 72
ಆರ್ ಅಶ್ವಿನ್ 62/4, ಶಮಿ 64/3

ವಿರಾಟ್ ಕೊಹ್ಲಿ 122, ಶಿಕರ್ ಧವನ್ 26
ಸಮ್ ಕರನ್ 74/4

Leave a Reply