ನಾವು ಪ್ರತಿನಿತ್ಯ ತಿನ್ನುವ ಆಹಾರಗಳೆಷ್ಟು, ವ್ಯರ್ಥ ಮಾಡುವ ಆಹಾರಗಳೆಷ್ಟು? ಇವೆಲ್ಲದರ ಲೆಕ್ಕ ಇಟ್ಟರೆ ಬಹುಶಃ ನಾವು ಮುಂದೆಂದೂ ಒಂದು‌ ತುತ್ತು ಅನ್ನವನ್ನು ಅಥವಾ ಒಂದು ಚೂರು ರೊಟ್ಟಿಯ ಭಾಗವನ್ನೂ ಕಳೆಯಲಾರೆವು ಯಾಕೆಂದರೆ ನಮಗೆ ಆಹಾರದ ಮಹತ್ವವನ್ನು ತಿಳಿಯಲು ಸಾಧ್ಯವಿದೆ.

ನಿಮಗೆ ಗೊತ್ತಾ ಇಲ್ಲೊಂದು ಊರಿದೆ. ಆಫ್ರಿಕನ್ ಖಂಡದ ಕೆರಿಬ್ಬಿಯನ್ ದ್ವೀಪದಲ್ಲಿರುವ ಹೈತಿ ಎಂಬ ಊರಿನಲ್ಲಿ ಜನರು ತಿನ್ನಲು ಆಹಾರವಿಲ್ಲದೆ ಬರೀ ಮಣ್ಣುಗಳನ್ನು ಕಲಸಿ, ಒಣಗಿಸಿ ಆಹಾರ ಮಾಡಿ ತಿನ್ನುತ್ತಾರೆ. ದಿನದ ಮೂರು ಬರೀ ಮಣ್ಣುಗಳಿಂದ ತಯಾರಿಸಿದ ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ತಿನ್ನುತ್ತಾರೆ. ಇಲ್ಲಿಯ ಜನರಿಗೆ ಮಣ್ಣಿನ ಹೊರತಾಗಿ ತಿನ್ನಲು ಬೇರೆನು ಲಭಿಸಲ್ಲ.

ಸಣ್ಣಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಇಲ್ಲಿನ ಜನರು ಮೂರು ಹೊತ್ತು ಮಣ್ಣನ್ನು ಬಿಟ್ಟರೆ ಬೇರೆ ಏನನ್ನು ಸೇವಿಸಲು ಸಾಧ್ಯವಾಗುವುದಿಲ್ಲ. 21ನೇ ಶತಮಾನದ ಭಾಗಶಃ ಕೊನೆಯಲ್ಲಿ ನಾವಿದ್ದರೂ ಇಂಥವರು ಈ ಭೂಮಿ ಇದ್ದಾರೆ ಎಂದರೆ ನಾವು ನಂಬಲೇಬೇಕು. ಸುತ್ತಮುತ್ತ ಹತ್ತಾರು ದೇಶಗಳು ಇದ್ದರು ಇವರತ್ತ ಅಷ್ಟೆನೂ ಗಮನಹರಿಸದೆ ಇರುವುದು ನೋಡಿದರೆ ನಿಜಕ್ಕೂ ದುರಂತ ಅನ್ನಬೇಕಾಷ್ಟೆ.

ದಿನನಿತ್ಯ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ಸೇವಿಸಿ ಉಳಿದದನ್ನು ಬಿಸಾಕುವವರಿದ್ದಾರೆ.‌ ಆ ಉಳಿದ ಆಹಾರವನ್ನು ಇವರಿಗೆ ಕೊಟ್ಟರು ಖುಷಿಯಿಂದ ಸವಿದು ಮನತುಂಬಿ ನಮಗೆ ಪ್ರಾರ್ಥಿಸುವವರು. ಆದರೆ ನಾವೆಷ್ಟು ಸ್ವಾರ್ಥಿಗಳು?

ಇಂದು ಒಬ್ಬ ಶ್ರೀಮಂತ, ಮಧ್ಯಮ ವರ್ಗದವನ ಮನೆಯಲ್ಲಿ ವಿವಾಹ ಕಾರ್ಯಕ್ರಮವೊಂದು ನಡೆದರೂ ವ್ಯರ್ಥವಾಗುವ ಆಹಾರಗಳೆಷ್ಟು? ವ್ಯಕ್ತಿಗಳಿಗೆ ಬೇಕಾಗುವಷ್ಟು ಅನ್ನ-ಆಹಾರಗಳನ್ನು ನೀಡುವ ಬದಲು ತಟ್ಟೆ ತುಂಬಿ ನೀಡುತ್ತೆವೆ. ಕೆಲವೊಮ್ಮೆ ಕೊಟ್ಟ ಕಾಲು ಭಾಗವನ್ನು ತಿನ್ನದ ಜನರಿರುತ್ತಾರೆ ಇವೆಲ್ಲದರ ಬಗ್ಗೆ ನಾವಿನ್ನು ಯೋಚಿಸುವಷ್ಟು ಪ್ರಬುದ್ಧರಾಗಿಲ್ಲ.

ರಸ್ತೆ ಬದಿಯಲ್ಲಿ ಕಾಣ ಸಿಗುವ ಕಸದ ತುಟ್ಟಿಯ ಬಳಿ ಬಿಸಾಡಿದ ಆಹಾರಕ್ಕಾಗಿ ಕಾಯುವ ಜನರೂ ನಮ್ಮ ನಡುವೆ ಇದ್ದಾರೆ, ಹಸಿದರು ಸ್ವಾಭಿಮಾನಿಯಿಂದ ಬದುಕುತ್ತಿರುವ ಜನರೂ ಇದ್ದಾರೆ. ‌ನಾವು ಬಹಳ ಗಂಭೀರವಾಗಿ ಯೋಚಿಸಬೇಕಾದ ವಿಚಾರವಿದು. ನಾವು ತಿಂದು ಎಸೆಯುವ ಅದೆಷ್ಟೋ ವ್ಯರ್ಥ ಆಹಾರದ ಹಿಂದೆ ಲಕ್ಷಾಂತರ ಹಸಿದ ಹೊಟ್ಟೆಗಳಿವೆ ಎನ್ನುವ ಸತ್ಯ!

ಯೋಚಿಸಿ ಸ್ನೇಹಿತರೇ, ಇಂದೇ ತೀರ್ಮಾನಕ್ಕೆ ಬರೋಣ. ನಮ್ಮ ಕಣ್ಣಮುಂದೆ ವ್ಯರ್ಥವಾಗುವ ಆಹಾರ ಕಂಡರೆ ಅವರಿಗೆ ಪ್ರೀತಿಯಿಂದ ಮನವರಿಕೆ ಮಾಡೋಣ ಯಾಕೆಂದರೆ ಹಸಿದ ಜೀವಗಳ ಶಾಪ ಬಲುಬೇಗನೆ ತಟ್ಟುತ್ತದೆ.

Leave a Reply