ಪ್ರಾಣಿಗಳ ಕಳ್ಳಸಾಗಣೆ ಗಂಭೀರ ಅಪರಾಧವಾಗಿದೆ, ವಿಶೇಷವಾಗಿ ಕೆಲವು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಬಗ್ಗೆ ಬೇರೆ ಹೇಳುವುದೇ ಬೇಡ.

ಕೊರಿಯರ್ ಮೂಲಕ ಹುಲಿಯ ಮರಿಯ ಕಳ್ಳಸಾಗಣೆ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ.

ಪ್ಲಾಸ್ಟಿಕ್ ಕಂಟೇನರ್ ನಲ್ಲಿ ಹುಲಿ ಮರಿಯನ್ನು ಪ್ಯಾಕ್ ಮಾಡಿ ಸಾಗಿಸುತ್ತಿರುವುದನ್ನು ಪತ್ತೆ ಮಾಡಲಾಗಿದ್ದು, ಸ್ವಲ್ಪ ಉಸಿರಾಡಲು ಬೇಕಾದ ತೂತನ್ನು ಮಾಡಲಾಗಿತ್ತು. ಈ ಘ ಮೆಕ್ಸಿಕೋದ ಹೊಸ ತಲ್ಕ್ಪಾಕ್ಕ್ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹುಲಿ ಮರಿಯ ಚಿತ್ರಗಳು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಜಲಿಸ್ಕೊದಲ್ಲಿ ಈ ಬೆಂಗಾಲ್ ಹುಲಿಗಳನ್ನು ಕ್ವೆರೆಟಾರೊ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಂಚೆ ಕಚೇರಿಯ ನಾಯಿ ಬೊಗಳಿದ್ದರಿಂದ ಅಲ್ಲಿನ ಅಧಿಕಾರಿಗಳಿಗೆ ವಿಷಯ ತಿಳಿದಿದ್ದು, ಮರಿಯನ್ನು ಆ ನಾಯಿಯು ರಕ್ಷಿಸಿತು ಎಂದು ಹೇಳಲಾಗಿದೆ.

ಮೆಕ್ಸಿಕೊದ ಫೆಡರಲ್ ಪೋಲೀಸರು, ಪ್ಲಾಸ್ಟಿಕ್ ಚೀಲದಲ್ಲಿ ಟೇಪ್ ಗಳಿಂದ ಬಂಧಿಯಾಗಿದ್ದ 2 ತಿಂಗಳ ಹುಲಿ ಮರಿಯ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

Image result for tiger cub in courier

ಯುಪಿಐ ವರದಿಗಳ ಪ್ರಕಾರ, ಮರಿ ನಿರ್ಜಲೀಕರಣಗೊಂಡಿದ್ದರೂ ಉತ್ತಮ ಆರೋಗ್ಯದಲ್ಲಿ ಇದೆ. ಒಂದು ವೇಳೆ ಆರೋಗ್ಯ ಹದಗೆಟ್ಟರೆ ಟ್ಲಾಜಮೊಲ್ಕೊ ಡಿ ಜುನಿಗಾ ಪುರಸಭೆಯ ವನ್ಯಜೀವಿ ಪಾರುಗಾಣಿಕಾ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Related image

ಪ್ಲಾಸ್ಟಿಕ್ ಪ್ಯಾಕ್ ನಲ್ಲಿ ಹಿಂಸೆ ನೀಡಿ ಪ್ಯಾಕ್ ಮಾಡಿದ ಹುಲಿ ಮರಿಯ ಫೋಟೋ ನೋಡುವಾಗ ಯಾರಿಗೂ ಮನ ನೋಯದೇ ಇರದು..

Leave a Reply