ರಾಯಬರೇಲಿ: ಪ್ಲ್ಯಾಸ್ಟಿಕ್ ನಿಂದ ಪರಿಸರವನ್ನು ಸಂರಕ್ಷಿಸಲಿಕ್ಕಾಗಿ, ಡಾಲ್ಮಾುವಿನ ಖಂಡೇಶ್ವರಿ ಆಶ್ರಮದ ಮಹಂತ್ ರವರು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಕಾಗದದ ಮೂಲಕ ಪೆನ್ನುಗಳನ್ನು ರಚಿಸಿ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.

“ಪ್ಲ್ಯಾಸ್ಟಿಕ್ ಪರಿಸರವನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ ನಾನು ಇದನ್ನು ಪ್ರಾರಂಭಿಸಿದ್ದು ಜನರು ನನಗೆ ಸಹಾಯ ಮಾಡುತ್ತಿದ್ದಾರೆ‌. ನಾವು ಈ ಕಾಗದದ ಪೆನ್ನುಗಳನ್ನು ಉಚಿತವಾಗಿ ನೀಡುತ್ತೇವೆ. ಆದರೆ ಕೆಲವು ಜನರು ನನಗೆ ಹಣವನ್ನು ನೀಡಿ ಈ ಕೆಲಸವನ್ನು ಮುಂದುವರೆಸುವಂತೆ ಹೇಳುತ್ತಾರೆ” ಎಂದು ಆಶ್ರಮದ ಮಹಾಂತ್ ಕೃಷ್ಣ ಬಿಹಾರಿ ಎಎನ್ಐ ಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಈ ಕಾರಣದಿಂದಾಗಿ ಅನೇಕ ಜನರು ಕೃಷ್ಣ ಬಿಹಾರಿಯವರ ಪರಿಸರವನ್ನು ಉಳಿಸುವ ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಆಶ್ರಮದಲ್ಲಿರುವ ಪುರುಷರು ಮತ್ತು ಮಹಿಳೆಯರು ದೈನಂದಿನ ಪಾವತಿ ಆಧಾರದ ಮೇಲೆ ಪೆನ್ನುಗಳನ್ನು ತಯಾರಿಸುವಲ್ಲಿ ಕೊಡುಗೆ ನೀಡುತ್ತಾರೆ ಎಂದು ಅವರು ಹೇಳುತ್ತಾರೆ.

“ಈ ಪೆನ್ನುಗಳನ್ನು ನಾವು ಹಳೆಯ ಪತ್ರಿಕೆಗಳನ್ನು ಉಪಯೋಗಿಸಿ ತಯಾರಿಸುತ್ತಿದ್ದೇವೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಪ್ಲ್ಯಾಸ್ಟಿಕ್ ಅನ್ನು ಬಳಸುವುದಕ್ಕಿಂತ ಇದು ಉತ್ತಮವಾಗಿರುತ್ತದೆ” ಎಂದು ಪೆನ್ನು ತಯಾರಿಸುವ ಆಶ್ರಮದ ವ್ಯಕ್ತಿಯೋರ್ವರು ಅಭಿಪ್ರಾಯ ಪಡುತ್ತಾರೆ.ಈಗಾಗಲೇ 400 ರಷ್ಟು ಪೆನ್ನು ತಯಾರಿಸಲಾಗಿದೆ.

 

Leave a Reply