ಬೆಳ್ತಂಗಡಿ ತಾಲೂಕಿನ ಕರಾಯ ಸರಕಾರಿ ಪ್ರೌಢ ಶಾಲೆ ಸಮೀಪ ಮಳೆ ಗಾಳಿ ರಭಸಕ್ಕೆ ಮರವೊಂದು ವಿದ್ಯುತ್ ಟ್ರಾನ್ಸ್ಫಾರ್ಮರ್ ಗೆ ಬಿದ್ದು ಗಂಟೆಗಳಲ್ಲಿ ದುರಸ್ತಿ ಪಡಿಸಿದ ಘಟನೆಯು ಇಂದು ಸಾಯಂಕಾಲ ನಡೆದಿದೆ.

ಯಾವುದೇ ಅನಾಹುತಗಳು ಸಂಭವಿಸಿದ ವರದಿಯಾಗಿಲ್ಲ.ಕರಾಯದಲ್ಲಿ ಹಲವು ವಿದ್ಯುತ್ ತಂತಿಗಳ ಮೇಲೆ ಬೃಹತ್ ಗಾತ್ರದ ಮರದ ಕೊಂಬೆಗಳು ಹರಡಿವೆ.ಇವುಗಳ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಮುಂಜಾಗ್ರತೆಯನ್ನು ವಹಿಸಿ ಮುಂದೆ ಆಗುವ ಅನಾಹುತವನ್ನು ತಡೆಯುವ ಕಾರ್ಯ ನಡೆಯಬೇಕಿದೆ.

ಊರಿನ ಜನಪ್ರತಿನಿಧಿಗಳ ಕ್ಷಿಪ್ರ ಕಾರ್ಯಾಚರಣೆ ಮತ್ತು ಅಧಿಕಾರಿಗಳು ಮಳೆಯ ನಡುವೆಯು ವಿದ್ಯುತ್ ಕಂಬಗಳನ್ನು ಸರಿಪಡಿಸಿ ಗಂಟೆಗಳಲ್ಲಿ ವಿದ್ಯುತ್ ಸರಬರಾಜು ಮಾಡುತ್ತಾ ಕರ್ತವ್ಯನಿಷ್ಟೆ ಮೆರೆದರು.ಮೆಸ್ಕಾಂ ಅಧಿಕಾರಿಗಳಿಗೆ ಕರಾಯದ ನಾಗರಿಕರಿಂದ ಶ್ಲಾಘನೀಯ ಮಾತುಗಳು ಹರಿದಾಡುತ್ತಿದೆ.

ವರದಿ : ಅಝೀಮ್ ಕರಾಯ

Leave a Reply