ನ್ಯೂಯಾರ್ಕ್: ವಾರ್ತೆ ಓದುತ್ತಿರುವಾಗ ಬಿಕ್ಕಿಬಿಕ್ಕಿ ಅತ್ತ ವಾರ್ತಾ ವಾಚಕಿಯ ದೃಶ್ಯ ಈಗ ವೈರಲ್ ಆಗುತ್ತಿದೆ. ಅಮೇರಿಕದ ಎಂಎಸ್‍ಎನ್‍ಬಿ ಯ ವಾರ್ತಾ ವಾಚಕಿ ರಿಚಲ್ ಮಾಡೋ ವಾರ್ತೆ ಓದುತ್ತಿರುವಾಗ ದುಃಖ ತಡೆಯಲಾರದೆ ಅತ್ತಯ ಬಿಟ್ಟರು.

ಅಮೇರಿಕದ ಗಡಿ ಪ್ರವೇಶಿಸುವ ವಲಸಿಗರ ಮಕ್ಕಳನ್ನು ಮಾತಾಪಿತರಿಂದ ಬೇರ್ಪಡಿಸಿ ಪ್ರತ್ಯೇಕ ಕೇಂದ್ರಗಳಿಗೆ ಕಳುಹಿಸುವ ಟ್ರಂಪ್ ಆಡಳಿತದ ನಿರ್ಧಾರಕ್ಕೆ ಸಂಬಂಧಿಸಿದ ವಾರ್ತೆ ಓದುತ್ತಿರುವ ಮಧ್ಯೆ ಅತ್ತು ಬಿಟ್ಟರು.

ಅಮೇರಿಕಕ್ಕೆ ಬರುವ ವಲಸಿಗರ ಬಂಧಿಸಿ ಸೆರೆಮನೆಗೆ ತಳ್ಳಿ ಅವರ ಮಕ್ಕಳನ್ನು ಪ್ರತ್ಯೇಕ ಸ್ಥಳಗಳಿಗೆ ತಲುಪಿಸುವ ವಾರ್ತೆ ಓದುತ್ತಿರುವಾಗ ದುಃಖ ತಾಳಲಾರದೆ ವಾರ್ತೆ ಓದಿ ಮುಗಿಸಲಾಗಲಿಲ್ಲ. ಬಳಿಕ ವಾರ್ತೆಯ ವಿವರ ಓದಲು ಸಹಾಯಕಿಗೆ ಒಪ್ಪಿಸಿದರು.

ವಾರ್ತೆ ಓದುವಾಗ ಸಂಭವಿಸಿದ ಈ ಲೋಪಕ್ಕೆ ಅವರು ಬಳಿಕ ಟ್ವೀಟರ್ ಮೂಲಕ ಕ್ಷಮಾಯಾಚನೆ ಮಾಡಿದರು. ಏನೇ ಆದರೂ ಅದನ್ನು ಸಹಿಸಿ ತನ್ನ ಕರ್ತವ್ಯ ನಿಭಾಯಿಸಬೇಕಿತ್ತು. ಆದರೆ ಆ ದೃಶ್ಯ ಕಂಡಾಗ ನನ್ನಿಂದ ಮಾತೇ ಹೊರಡಲಿಲ್ಲ.ಎಮದು ಅವರು ಸ್ಪಷ್ಟ ಪಡಿಸಿದರು. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.

Leave a Reply