ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಡುವಣ ನಡೆದ U19 ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ತಂಡ ಭರ್ಜರಿ 8 ವಿಕೆಟ್‌ಗಳಿಂದ ಜಯಿಸಿದೆ.

ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 47.2 ಓವರಿನಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 216 ರನ್‌ಗಳನಷ್ಟೆ ದಾಖಲಿಸಿತ್ತು. ಇದನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಟಗಾರ ಮನ್ಜೋತ್ ಕಾಲ್ರ ಭಾರಿಸಿದ ಆಕರ್ಷಕ ಶತಕ 101 ರನ್, 8 ಬೌಂಡರಿ, 3 ಸಿಕ್ಸರ್ ನೆರವಿನಿಂದ ಆಸ್ಟ್ರೇಲಿಯಾ ತಂಡದ ವಿರುದ್ಧ 8 ವಿಕೆಟ್‌ಗಳ ಜಯದಿಂದ, ವಿಶ್ವ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.

ರಾಹುಲ್ ದ್ರಾವಿಡ್‍ರ ತರಬೇತಿಯಡಿ ಗೆದ್ದಿರುವ ಪೃಥ್ವಿ ಶಾ ಸಾರಥ್ಯದ ಟೀಂ ಇಂಡಿಯಾ ಕಿರಿಯರ ವಿಶ್ವಕಪ್‍ನಲ್ಲಿ 4ನೇ ಬಾರಿಗೆ ವಿಶ್ವಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ. ರಾಹುಲ್ ದ್ರಾವಿಡ್ ಯುವಪಡೆ ವಿಶ್ವಕಪ್‍ನಲ್ಲಿ ಉತ್ತಮ ಹೋರಾಟ ಪ್ರದರ್ಶಿಸ ಫೈನಲ್‌ನಲ್ಲಿ ಅಜೇಯ ಓಟ ಮುಂದುವರೆಸಿರುವುದು ಕೂಡ ಕಿರಿಯ ವಿಶ್ವಕಪ್‍ನಲ್ಲಿ ದಾಖಲೆಯಾಗಿದೆ.

ಆಸ್ಟ್ರೇಲಿಯಾ ನೀಡಿದ 217 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಮಳೆ ಅಡ್ಡಿಯನ್ನು ಉಂಟು ಮಾಡಿದ್ದಾದರು, ಅರ್ಧ ಗಂಟೆಗಳ ನಂತರ ಪಂದ್ಯ ಆರಂಭಗೊಂಡು ಆರಂಭಿಕ ಆಟಗಾರ ಮನ್ಜೋತ್ ಕಾಲ್ರ ಆಕರ್ಷಕ ಶತಕದಿಂದ ಗೆಲುವನ್ನು ಸುಲಭವಾಗಿ ಬೆನ್ನಟ್ಟುವಲ್ಲಿ ತಂಡ ಯಶ ಕಂಡಿತು.

ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕ್ರೀಸ್‍ಗಿಳಿದ ನಾಯಕ ಪೃಥ್ವಿ ಶಾ ಹಾಗೂ ಮನ್ಜೋತ್ ಕಾಲ್ರ ಆರಂಭಿಕ ವಿಕೆಟ್‍ಗೆ 71 ರನ್‍ಗಳ ಕಾಣಿಕೆಯನ್ನು ನೀಡಿದಾಗಲೇ ಟೀಂ ಇಂಡಿಯಾ ವಿಶ್ವಚಾಂಪಿಯನ್ ಆಗುವುದು ಖಚಿತವಾಗಿತ್ತು.
41 ರನ್‍ಗಳನ್ನು ಎದುರಿಸಿ 4 ಬೌಂಡರಿಗಳ ನೆರವಿನಿಂದ 29 ರನ್ ಗಳಿಸಿದ್ದ ಪೃಥ್ವಿ ಶಾ ಭರ್ಜರಿ ಹೊಡೆತಕ್ಕೆ ಮುಂದಾಗಿ ಸೌತರ್‍ಲ್ಯಾಂಡ್ ಬೌಲಿಂಗ್‍ನಲ್ಲಿ ಕ್ಲೀನ್ ಬೋಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.

ನಾಲ್ಕನೇ ಬಾರಿ ಚಾಂಪಿಯನ್

  • U19 ಮೊಟ್ಟಮೊದಲ ವಿಶ್ವಕಪ್ ಅಂದಿನ ಕಪ್ತಾನ ಮೊಹಮ್ಮದ್ ಕೈಫ್ ನೇತ್ರತ್ವದಲ್ಲಿ ಭಾರತಕ್ಕೆ ಲಭಿಸಿತ್ತು‌
  • 2000 – ಮಹಮ್ಮದ್ ಕೈಫ್ ಸಾರಥ್ಯದಲ್ಲಿ ಭಾರತ ಶ್ರೀಲಂಕಾವನ್ನು 6 ವಿಕೆಟ್ ಗಳಿಂದ ಸೋಲಿಸಿ ಮೊದಲ ಬಾರಿಗೆ ಕಪ್ ಗೆದ್ದಿತ್ತು.
  • 2008 – ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 12 ರನ್ ಗಳಿಂದ ಗೆಲ್ಲುವ ಮೂಲಕ ಎರಡನೇ ಬಾರಿ ಕಪ್ ಗೆದ್ದಿತ್ತು.
  • 2012 – ಉನ್ಮುಕ್ತ್ ಚಾಂದ್ ನೇತೃತ್ವದಲ್ಲಿ ಆಸ್ತ್ರೇಲಿಯಾ ವಿರುದ್ಧ 6 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.
  • 2017 – ಪೃಥ್ವಿ ಶಾ ನೇತೃತ್ವದಲ್ಲಿ ಆಸೀಸ್ ವಿರುದ್ಧ 8 ವಿಕೆಟ್ ಗಳ ಜಯಗಳಿಸಿತು.

Leave a Reply