ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಕಿರಿಯರ ತಂಡ ಕೋಚ್ ರಾಹುಲ್ ದ್ರಾವಿಡ್ ರನ್ನು ಎಲ್ಲೆಡೆಯಿಂದಲೂ ಪ್ರಶಂಸಿಸಲಾಗಿದೆ. ಟ್ವಿಟರ್ ನಲ್ಲಿ ಜನ ಮನಬಿಚ್ಚಿ ಹೊಗಳಿದ್ದಾರೆ.

ಒಂದರ್ಥದಲ್ಲಿ ರಾಹುಲ್ ದ್ರಾವಿಡ್ 2003 ರ ವಿಶ್ವಕಪ್‌ ಸೇಡನ್ನು ತೀರಿಸಿದಂತಾಗಿದೆ ಎನ್ನಲಾಗುತ್ತಿದೆ. ಈ ರೀತಿ ಕಿರಿಯರ ತಂಡ ಪ್ರದರ್ಶನ ತೋರಲು ದ್ರಾವಿಡ್ ರವರ ಪರಿಶ್ರಮ ಮಾರ್ಗದರ್ಶನ ತುಂಬಾ ಇದೆ.

ನಮ್ಮ ತಂಡದ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ. ನಾವು ಕಳೆದ 14 ತಿಂಗಳಿನಿಂದ ಪಟ್ಟ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ ನಮ್ಮ ಹುಡುಗರು ನಿಜಕ್ಕೂ ವಿಶ್ವಕಪ್ ಜಯಿಸಲು ಅರ್ಹರಾಗಿದ್ದಾರೆ ಎಂದು ‘ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಕಿರಿಯ ಕ್ರಿಕೆಟಿಗರಿಗೆ ಇದೊಂದು ಸ್ಮರಣೀಯ ಸಮಯವಾಗಿದೆ. ಅವರಿಗೆ ಉತ್ತಮ ಭವಿಷ್ಯ ಇದೆ. ಇದರ ಭಾಗವಾದುದಕ್ಕೆ ಸಂತೋಷ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply