ಉಬರ್ ಕ್ಯಾಬ್ ಸೇವಾ ಸಂಸ್ಥೆ ಈಗಾಗಲೇ ಹಲವು ಬಾರಿ ಸುದ್ದಿ ಮಾಡಿದ್ದು ಇದೀಗ ಜನರು ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತಹ ಹಾಸ್ಯಚಟಾಕಿಗೆ ಗುರಿಯಾಗಿದೆ.

ಫೇಸ್ಬುಕ್ ಖಾತೆಯಲ್ಲಿ ಹುಸೈನ್ ಶೈಖ್ ಎಂಬುವವರು ಉಬರ್ ಚಾಲಕ ಅರಬೀ ಸಮುದ್ರದ ಮೂಲಕ ಬರುತ್ತಿರುವ ಮಾರ್ಗವನ್ನು ತೋರಿಸಿರುವ ಸ್ಕ್ರೀನ್ಶಾಟ್ ನ್ನು ” ಅಸ್ಲಮ್ ಭಾಯ್ ಸಬ್ ಮರೈನ್ ಸೇ ಆರಾಲೇ ಹೈ” ಎಂಬ ಸ್ಟೇಟಸ್ ನೊಂದಿಗೆ ಹಂಚಿಕೊಂಡಿದ್ದಾರೆ.

ಇದೀಗ ಫೇಸ್ಬುಕ್ ನಲ್ಲಿಡೀ ಹರಿದಾಡುತ್ತಿರುವ ಈ ಪೋಸ್ಟ್ 4945 ಬಾರಿ ಶೇರ್ ಆಗಿದ್ದು 1.7 k ಲೈಕ್ ಗಳನ್ನು ಕಂಡಿದೆ.

ಈ ಕುರಿತು ಕಮೆಂಟ್ ಮಾಡಿದ ಓರ್ವ ಫೇಸ್ಬುಕ್ ಬಳಕೆದಾರ “2018 ರಲ್ಲಿ ಹಾರುವ ಕಾರ್ ಗಳ ಕುರಿತು ಹೇಳಿದ್ದಿರಿ ?! ಇದೋ ನಿಮಗೆ ತೇಲಾಡುವ ಉಬರ್ ಕಾರ್ ಸವಾರಿ” ಎಂದು ಹೇಳಿಕೊಂಡಿದ್ದಾರೆ‌.

ಈ ಮೊದಲು ಮ್ಯಾಪ್ ನ ಸಹಾಯದಿಂದ ಡ್ರೈವ್ ಮಾಡಿ ಕಾರನ್ನು ಮುಳುಗಿಸಿದ ಘಟನೆಯನ್ನು ಇಲ್ಲಿ ಸ್ನರಿಸಬಹುದು.ಎಲ್ಲವೂ ಟೆಕ್ನಾಲಜಿ ಲೀಲೆ!!

Leave a Reply