ಕ್ರೈಸ್ಟ್‌ ಚರ್ಚ್‌:ಅಂಡರ್‌ 19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಅಂಡರ್‌ 19 ತಂಡ ಮಂಗಳವಾರ ನಡೆದ ಸೆಮಿ ಫೈನಲ್‌ನಲ್ಲಿ ಪಾಕಿಸ್ಥಾನದ ವಿರುದ್ಧ ಅಮೋಘ ವಿಜಯ ದಾಖಲಿಸಿದೆ. ಫೆಬ್ರವರಿ 3 ರಂದು ಚಾಂಪಿಯನ್ ಶಿಪ್ ಗಾಗಿ ಆಸ್ಟ್ರೇಲಿಯ ವಿರುದ್ಧ ಸೆಣಸಬೇಕಾಗಿದೆ.

ಟಾಸ್‌ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ 50 ಓವರ್‌ಗಳಲ್ಲಿ ಶುಭಂ ಗಿಲ್ಲ್‌ ಭರ್ಜರಿ ಶತಕದೊಂದಿಗೆ 9 ವಿಕೆಟ್‌ ನಷ್ಟಕ್ಕೆ 272 ರನ್‌ಗಳಿಸಿತು. 102 ರನ್‌ ಗಳಿಸಿದ ಗಿಲ್‌ ಅಜೇಯರಾಗಿ ಉಳಿದರು.

273 ರನ್‌ಗಳ ಗುರಿ ಬೆನ್ನಟ್ಟಿದ ಪಾಕ್‌ ಭಾರತ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ 29.3 ಓವರ್‌ಗಳ ಒಳಗೆ 69 ರನ್‌ಗಳಿಗೆ ಆಲೌಟಾಯಿತು.

ಭಾರತದ ಪರ ಇಶಾನ್‌ ಪೊರೆಲ್‌ 4 ವಿಕೆಟ್‌ ಶಿವ್‌ ಸಿಂಗ್‌ ಮತ್ತು ರಿಯಾನ್‌ ಪರಂಗ್‌ ತಲಾ 2 ವಿಕೆಟ್‌ ಪಡೆದರು. ಈ ಮಧ್ಯೆ 69 ರನ್‌ಗಳಿಗೆ ಆಲೌಟಾದ ಪಾಕಿಸ್ತಾನ ತಂಡವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ.

  • ಕೆಳಗೆ ಒಂದು ಟ್ರೋಲ್ ಹೀಗಿದೆ

U19 ವಿಶ್ವಕಪ್

ಶುಬ್ಬನ್ ಗಿಲ್ 102 * ನಾಟ್ ಔಟ್
ಪಾಕಿಸ್ತಾನ 69 ಆಲ್ ಔಟ್

ಗಿಲ್ 33 ರನ್ಗಳಿಂದ ಗೆದ್ದಿದ್ದಾರೆ. : ಡಿ

Leave a Reply