ಸೀತಾಪುರ: ವೇತನ ದೊರೆಯಬೇಕಾದರೆ ಸ್ವತಹ ಮನೆಯ ಶೌಚಾಲಯದಲ್ಲಿ ಕುಳಿತ ದೃಶ್ಯ ತೆಗೆದು ಕಳುಹಿಸಬೇಕು. ಉತ್ತರ ಪ್ರದೇಶದ ಸೀತಾಪುರದ ಸರಕಾರೀ ಶಾಲೆಯ ಅಧ್ಯಾಪಕರಿಗೆ ಈ ಆದೇಶ ಬಂದಿದೆ. ಭಗವತಿ ಪ್ರಸಾದ್ ಎಂಬ ಅಧ್ಯಾಪಕರೋರ್ವರ ಆಧಾರ್ ಮತ್ತು ಫೋನ್ ನಂಬರ್ ಇರುವ ವಿವರಗಳೋಂದಿಗೆ ಶೌಚಾಲಯದಲ್ಲಿ ಕುರ್ಚಿ ಹಾಕಿ ಕುಳಿತ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದರೊಂದಿಗೆ ಈ ವಿವರ ಬಹಿರಂಗವಾಗಿದೆ.

ಕೆಲದಿನಗಳ ಹಿಂದೆ ಸೀತಾಪುರ ನ್ಯಾಯಾಧೀಶ ಶೀತಲ್ ವರ್ಮ ಹಿರಿಯ ನೌಕರರಿಗೆ ಈ ಆದೇಶ ಹೊರಡಿಸಿದ್ದಾರೆ. ಮನೆಯಲ್ಲಿ ಶೌಚಾಲಯವಿದೆಯೆಂದು ಸಾಬೀತು ಪಡಿಸಲು ಈ ಚಿತ್ರವನ್ನು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚಭಾರತ್ ಅಭಿಯಾನದ ಭಾಗವಾಗಿ ಎಲ್ಲ ಗ್ರಾಮಗಳಲ್ಲಿ ಬಯಲು ವಿಸರ್ಜನೆ ಮುಕ್ತಗೊಳಿಸುವ ಯೋಜನೆಯ ಭಾಗವಾಗಿ ಈ ಆದೇಶ ಹೊರಡಿಸಲಾಗಿದೆ. ಸರಕಾರಿ ಉದ್ಯೋಗಸ್ಥರು ಎಲ್ಲರೂ ಈ ಚಿತ್ರ ತೆಗೆದು ಕಳುಹಿಸಬೇಕು. ಅದರಲ್ಲಿ ಏನಾದರೂ ಲೋಪವಾದರೆ ಸಂಬಳಕ್ಕೆ ಕುತ್ತು ಬರುವುದು. ಈ ತಿಂಗಳ ಇಪ್ಪತ್ತೇಳರೊಳಗಾಗಿ ಈ ಚಿತ್ರ ಕಳುಹಿಸಬೇಕು.

Leave a Reply