ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ದೇವಸ್ಥಾನಕ್ಕೆ ಆಹಾರ ಸಚಿವ ಯುಟಿಖಾದರ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ್ದು ವಾಟ್ಸಪ್ ಸಾಮಾಜಿಕ ಜಾಲ ತಾಣದಲ್ಲಿ ಮುಸ್ಲಿಂ ಸಮುದಾಯದ ಕೆಲವರ ವಿರೋಧಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಮಂಗಳೂರಿನ ಪ್ರಸಿದ್ಧ ಕೊರಗಜ್ಜನ ಕ್ಷೇತ್ರದಲ್ಲಿ ಕೊರಗಜ್ಜನಿಗೆ ನರ್ತನ ಸೇವೆ ನಡೆದಿತ್ತು. ಈ ಸಂದರ್ಭದಲ್ಲಿ ಸಚಿವ ಯುಟಿ ಖಾದರ್ ಕೂಡಾ ಭೇಟಿ ನೀಡಿದ್ದು, ಸ್ವತಃ ದೈವ ಪಾತ್ರಿಯಿಂದ ಕೊರಗಜ್ಜನ ಪ್ರಸಾದವನ್ನೂ ಸ್ವೀಕರಿಸಿದ್ದರು. ಆ ಬಗ್ಗೆ ಸಚಿವ ಖಾದರ್ ನಡೆಯನ್ನು ವಿರೋಧಿಸಿ ಬರಹಗಳು ವ್ಯಾಪಕ ವಾಗಿ ಹರಿಯುತಿದೆ.

ಈ ರೀತಿ ಹಿಂದೂಗಳ ದೇವಸ್ಥಾನಕ್ಕೆ ಹೋಗಿ ಹಿಂದೂಗಳ ಮತ ಸಿಗಲ್ಲ, ಇದರಿಂದ ಅವರು ಹಳಿ ತಪ್ಪಿದ್ದಾರೆ. ವೈಯಕ್ತಿಕವಾಗಿ ಇತರರ ಧರ್ಮವನ್ನು ಪಾಲಿಸುವುದು ತಪ್ಪು ಎಂದು ಬರೆದಿದ್ದಾರೆ. ಈ ಮಧ್ಯೆ ಧರ್ಮಗುರು ಒಬ್ಬರ ಲೇಖನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊರಗಜ್ಜರ ಆ ಕಾರ್ಯಕ್ರಮಕ್ಕೆ ಹೋದದ್ದು ಸರಿಯೇ ತಪ್ಪೇ ಎಂಬ ಚರ್ಚೆ ಪರಸ್ಪರ ಮಾಡಲಾಗುತ್ತಿದೆ. ಧಾರ್ಮಿಕ ಸೌಹಾರ್ದ ಎಂಬ ನೆಲೆಯಲ್ಲಿ ಸಚಿವ ಧರ್ಮದಂತೆ ಇತರ ಧರ್ಮೀಯರ ಆಚರಣೆಗಳಲ್ಲಿ ಭಾಗವಹಿಸಬಾರದೇ ಎಂಬುದು ಪ್ರಶ್ನೆ ಉಧ್ಭವಿಸಿದೆ.



video courtesy : Gulf kannadiga

Leave a Reply